Home » Posts tagged 'chip'

Tag Archives: chip

Advertisements

ಚಿಪ್ ತಂತ್ರಜ್ನಾನ-ಸುಧೀಂದ್ರ ಅವರ ಕನ್ನಡ ಬರಹ-ನನ್ನ ವಿಮರ್ಷೆ!


ಹಾಲ್ದೊಡ್ಡೇರಿ ಸುಧೀಂದ್ರ ಅವರ ದಿನಾಂಕ ಏಪ್ರಿಲ್ ಆರು, ೨೦೦೯ ರ  ಚಿಪ್ ತಂತ್ರಜ್ನಾನಕ್ಕೆ ಹೊಸ ಸಾಧ್ಯತೆ ನೀಡುತ್ತಿರುವ ಸಾಮಗ್ರಿ ನನ್ನ ಗಮನವನ್ನು ಬಹುವಾಗಿ ಸೆಳೆಯಿತು.

ನಾನು ಇದೇ ಕ್ಷೇತ್ರದಲ್ಲಿ ಕಾಯಕ ಮಾಡ್ತ ಇರೋದು. ನಾನೂ ಸಹ ತಂತ್ರಜ್ನಾನದ ಅದರಲ್ಲೂ ಈ ಅರೆವಾಹಕ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಬರೆಯಲು ಪ್ರಯತ್ನ ಮಾಡ್ತಾ ಇದ್ದೇನೆ. ಹಾಗಾಗಿ ಸುಧೀಂದ್ರ ಅವರ ಕನ್ನಡದ ಈ ಬರಹ ಸಹಜವಾಗಿ ನನ್ನ ಗಮನ ಸೆಳೆಯಿತು.

ನಾನು ಇನ್ನೂ ಈ ಕ್ಷೇತ್ರದಲ್ಲಿ ಸರಿಯಾಗಿ ಕಣ್ಣೂ 😉 ಸಹ ಬಿಟ್ಟಿಲ್ಲ. ಹಾಗಾಗಿ ಹಿರಿಯರಾದ ಸುಧೀಂದ್ರ ಅವರ ಬರಹದ ಬಗ್ಗೆ ವಿಮರ್ಶೆ / ಟೀಕೆ ಮಾಡಲು ಹೋಗ್ತಾ ಇಲ್ಲ. ತಪ್ಪು ತೋರಿಸುವುದು ಈ ಬರಹದ ಉದ್ದೇಶವಲ್ಲ. ನಾನು ಕೆಲವೊಂದು ಸನ್ನಿವೇಶಗಳನ್ನು ಅನುಭವಿಸಿದ ಆಧಾರದ ಮೇಲೆ ನನ್ನೆರಡು ಮಾತುಗಳು ಈ ಲೇಖನದ ಬಗ್ಗೆ!

ಈ ಬ್ಲಾಗಿನಲ್ಲಿ ಲೇಖಕರ ಇಂಗ್ಲೀಶಿನ Technical terms ಗೆ ಕನ್ನಡದ (ಪಾರಿಭಾಶಿಕ ಪದಗಳು! ….ಪಾರಿಭಾಶಿಕ ಅಂದ್ರೆ ಏನು?) ಅವರ ಪದಗಳ ಬಗ್ಗೆ ಬಗ್ಗೆ ಬರೆಯುತ್ತ ಇದ್ದೇನೆ.
… content ಅನ್ನೂ ಸೇರಿಸ್ಕೊಂಡು ಇತರೆ ವಿಶಯಗಳ ಬಗ್ಗೆ ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ.

  • ವಿದ್ಯುದಲೆಗಳ ಆವೃತ್ತಿ

ಇಂತಹ ಪದಗಳಿಗೆ ಇಂಗ್ಲೀಷಿನ ಪದಗಳನ್ನೂ ಬ್ರಾಕೆಟ್ನಲ್ಲಿ ಬರೆದರೆ ಅರ್ಥ ಮಾಡಿಕೊಳ್ಳಲು ಸುಲಭ.

>“ಆವೃತ್ತಿ” ಅಂದ್ರೆ ಏನು? Frequency ಅಂತಲೆ!

>“ವಿದ್ಯುದಲೆ” ಪದವನ್ನು ನಾನು ಮತ್ತೆ 😉 ನೇರವಾಗಿ ಇಂಗ್ಲೀಷಿಗೆ ಅನುವಾದ ಮಾಡಿದರೆ current pulse ಅಂತಾಗುತ್ತೆ. ಇಲ್ಲಿ current pulse ಆವೃತ್ತಿ (frequency) ಅಂದ್ರೆ ಏನು?

ನಾನು ಊಹಿಸಬಹುದಾದ (?!) ಮಟ್ಟಿಗೆ “ವಿದ್ಯುದಲೆಗಳ ಆವೃತ್ತಿ” ಅನ್ನುವ ಪದ ಒಂದು ಚಿಪ್ ನ clock speed ಬಗ್ಗೆ ಮಾತಾಡುತ್ತೆ ಅನ್ನಿಸುತ್ತೆ. ಮತ್ತು ಈ ಪದ clock speed ಬಗ್ಗೆ ಮಾತಾಡುವದೇ ಆದರೆ “ವಿದ್ಯುದಲೆ” ಪದ ತಪಾಗುತ್ತೆ ಅನ್ಸುತ್ತೆ.

  • ಅಲೆಗಳ ಕದಡುವಿಕೆ.

Frequency Multiplier ಜೊತೆಯಲ್ಲಿ ಈ ಪದವನ್ನು ಬಳಸಿರುವುದರಿಂದ ನಾನು “ಅಲೆಗಳ ಕದಡುವಿಕೆ” ಪದಕ್ಕೆ Jitter ಅಂತ ಅರ್ಥ ಮಾಡ್ಕೊತೀನಿ. ಅಲ್ದೇ ಹೋದರೆ signal distortion / Wave distortion ಅನ್ನುವ ಪದ ತಲೆಗೆ ಬರುತ್ತೆ. ಮತ್ತು ಎರಡೂ ಪದಗಳಿಗೆ ತುಂಬಾ ವ್ಯತ್ಯಾಸವಿದೆ.

  • ಸೋಸುಕ

ಬಹುಶ ಇದು filter ಪದಕ್ಕೆ ಬದಲಾಗಿ ಬಳಸಿದ್ದಾರೆ ಅನ್ಸುತ್ತೆ. ಯಾಕೋ ಈ ಪದ ತುಂಬಾ ಕೃತಕ ಅಂತ ನನಗೆ ಅನ್ನಿಸುತ್ತೆ. ( ನಮ್ಮಲ್ಲಿ ಈ ಪದ ಬಳಕೆಯಲ್ಲಿ ಇಲ್ಲದೇ ಇರುವುದಕ್ಕೆ ಇರಬಹುದು;) ) ಈಗಾಗಲೆ ಬಳಕೆಯಲ್ಲಿರುವ “ಜಾಲರಿ” ಪದವೂ ಒಪ್ಪುತ್ತೆ.

  • Processor

ಪದವನ್ನು ಹಾಗೇಯೇ ನೇರವಾಗಿ ಬಳಸಿದ್ದಾರೆ. ಸಂಪದದಲ್ಲಿಯೇ ಈ ಮುಂಚೆ ಬಳಸಲ್ಪಟ್ಟ “ಸಂಸ್ಕಾರಕ” ಪದ ಒಪ್ಪುತ್ತೇ ಅನ್ನಿಸುತ್ತೆ. ( ಹಾ ಬ್ರಾಕೆಟ್ನಲ್ಲಿ ಇಂಗ್ಲೀಶಿನ ಪದವನ್ನು ಒಮ್ಮೆಯಾದರೊ ಕೊಡಬೇಕು).

  • ಚಿಪ್

ಲೇಖನದ ಮೊದಲಲ್ಲೇ “ಕಂಪ್ಯೂಟರಿನ ಮಿದುಳಾದ ಸಿ ಪಿ ಯು ಅನ್ನು ಮುದ್ದಾಗಿ “ಚಿಪ್” ಎಂದು ಕರೆಯುವ ವಾಡಿಕೆಯಿದೆ” ಅಂತ ಇದೆ. ಇದು ಅಷ್ಟೊಂದು ಸರಿಯಾದ ವಾಕ್ಯವಲ್ಲ.. ಮತ್ತು ಓದುಗರನ್ನು mislead ಮಾಡುವ ಸಾಧ್ಯತೆ ಇದೆ.

ಈ ಬರಹಕ್ಕೆ ಇನ್ನೂ ಹೆಚ್ಚಿನ ವಷಯವನ್ನು ಮುಂದಿನಬ್ಲಾಗಿನಲ್ಲಿ ಸೇರಿಸಲು ಯೋಚಿಸ್ತಾ ಇದ್ದೀನಿ.

Note: ಈ ಬ್ಲಾಗಿನ ಉದ್ದೇಶ ಕನ್ನಡದಲ್ಲಿ ತಂತ್ರಜ್ನಾನದ ಬಗೆಗಿನ ಚರ್ಚೆಗೆ ನನ್ನೊಂದಿಷ್ಟು ಮಾತು ಸೇರಿಸುವುದಷ್ಟ್ಟೇ… ಟೀಕೆಗಾಗಿ ಈ ಬ್ಲಾಗು ಅಲ್ಲ.

Advertisements

ಮೂರ್ ನ ಕಟ್ಟಳೆ


ಗಾರ್ಡೆನ್ ಮೂರ್

ಗಾರ್ಡೆನ್ ಮೂರ್

Moore’s law, ಮೂರ್ಸ್ ಲಾ, ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! 😉

ಈ “ಮೂರ್ ನ ಕಟ್ಟಳೆ” ಅನ್ನುವುದು ಒಂದು ರೀತಿ empirical ಫಾರ್ಮುಲ. ಅಂದ್ರೆ ಅನುಭವದಿಂದ ಗಮನಕ್ಕೆ ಬಂದಿದ್ದು. ಯಾವುದೇ ಲೆಕ್ಕ , ಫಾರ್ಮುಲಗಳು ಇಲ್ಲಿ ಈ ಸಂಬಂಧವನ್ನು ಸಾಧಿಸುವಲ್ಲಿ ಪ್ರಾಮುಖ್ಯತೆ ವಹಿಸಲ್ಲ.

ಈ ಕಟ್ಟಳೆ ಏನು ಹೇಳುತ್ತಪ್ಪ ಅಂದ್ರೆ ” ಒಂದು ಅಚ್ಚಿನಲ್ಲಿ (die) ಎರಕ ಒಯ್ಯಬಹುದಾದ ಟ್ರಾನ್ಸಿಸ್ಟರುಗಳ ಸಂಖ್ಯೆ ಪ್ರತಿ ಒಂದೊವರೆ ವರ್ಷಕ್ಕೆ ದುಪ್ಪಟ್ಟಾಗುತ್ತೆ .” ಇದನ್ನು ಒಂದು ರೀತಿಯಲ್ಲಿ exponential ಬೆಳವಣಿಗೆ ಅನ್ನಬಹುದು.

ಗಾರ್ಡೆನ್ ಮೂರ್ ಅನ್ನುವ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಈತ ಇಂಟೆಲ್ ನ ಸಂಸ್ಥಾಪಕರಲ್ಲಿ ಒಬ್ಬ. ಮೂರ್ ನ ಕಟ್ಟಳೆ ಅನ್ನುವ “ಪ್ರವೃತ್ತಿ” ಯನ್ನು ೧೯೬೫ ರಲ್ಲೇ ಈತ ಊಹಿಸಿದ್ದ. ಆಗ ಬಂದ ಈತನ ಈ ಬರಹವೇ ಮೂರ್ ನ ಕಟ್ಟಳೆಗೆ ಮೂಲ ಅನ್ನುವುದು ಅನೇಕರ ಅನಿಸಿಕೆ.

ಈ ಪ್ರವೃತ್ತಿ ಮುಖ್ಯವಾಗಿ ಚಿಪ್ ಒಳಗಿನ ಟ್ರಾನ್ಸಿಸ್ಟರುಗಳು, ತಂತಿಗಳು ಮುಂತಾದ ಇತರ ಘಟಕಗಳು ಗಾತ್ರದಲ್ಲಿ ಕುಗ್ಗುವ ಕಾರಣದಿಂದ ಕಂಡುಬರುತ್ತೆ.

feature size ಅನ್ನುವುದು ಚಿಪ್ ನಲ್ಲಿ, ಒಂದು lithography ತಂತ್ರಜ್ಞಾನದಿಂದ ಎಳೆಯಬಹುದಾದ ಅತ್ಯಂತ ಸಣ್ಣ(ತೆಳ್ಳನೆಯ)ಗೆರೆ / ಕನಿಷ್ಟ ಗಾತ್ರದ ಆಕೃತಿಯ ಉದ್ದ ಅನ್ನಬಹುದು. ಇದು ಸಾಮಾನ್ಯವಾಗಿ ಒಂದು ಕನಿಷ್ಠ ಗಾತ್ರದ MOS ಟ್ರಾನ್ಸಿಸ್ಟರ್ ನ ಉದ್ದಕ್ಕೆ ಸಮವಾಗಿರುತ್ತೆ. ಅಂದರೆ ಈ ಉದ್ದಕ್ಕಿಂತ ಕಡಿಮೆ ಉದ್ದದ (ಅತ್ವ ಗಾತ್ರದ) ಟ್ರಾನ್ಸಿಸ್ಟರ್ ಅನ್ನು ಎರಕ ಒಯ್ಯಲು ಆಗದು. ಈ feature size ಕಡಿಮೆ ಆದಂತೆ ಹೆಚ್ಚು ಹೆಚ್ಚು ಟ್ರಾನ್ಸಿಸ್ಟರ್ ಗಳನ್ನು ಸಿಲಿಕಾನ್ ಅಚ್ಚಿನ ಮೇಲೆ ಎರಕ ಒಯ್ಯಲು ಸಾಧ್ಯವಾಗುತ್ತೆ.

“CMOS 130nm”, “90nm process”, “45nm CMOS Technology” ಹೀಗೆ ನೀವು ಪದಗಳನ್ನು ಕೇಳಿರುತ್ತೀರಿ. ಈ ನ್ಯಾನೋಮೀಟರ್ (nm) ಅಂತ ಬಳಸುವ ತಂತ್ರಜ್ಞಾನಗಳು ಎರಕ ಒಯ್ಯುವ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತಹ feature size ಉದ್ದವೇ 🙂 .

ಮೂರ್ ನ ಕಟ್ಟಳೆ plot

ಮೂರ್ ನ ಕಟ್ಟಳೆ plot