Home » chip

Category Archives: chip

Advertisements

ಮೊತ್ತ ಮೊದಲ ಮೈಕ್ರೋ ಚಿಪ್


 FirstIC

 

 ೧೨ September ೧೯೫೮

ಈ ದಿನಾಂಕದ್ದು ಏನಪ್ಪಾ ವಿಶೇಷ ಅಂದ್ರೆ ….Texas Instruments ನ ಜಾಕ್ ಕಿಲ್ಬಿ (Jack Kilby ) ಅನ್ನುವವನು ಜಗತ್ತಿನ ಮೊತ್ತ ಮೊದಲ ಮೈಕ್ರೋ ಚಿಪ್ ಅನ್ನು ಪ್ರದರ್ಶಿಸಿದ .

ಇದು ಒಂದು ಸಣ್ಣ (7/16 ಇಂಚ್  X 1/16 ಇಂಚ್ )  ವಿಸ್ತೀರ್ಣದ Germanium ಪಟ್ಟಿಯಾಗಿತ್ತು.

ಅದರಲ್ಲಿ ಒಂದೇ ಒಂದು  ಟ್ರಾನ್ಸಿಸ್ಟರ್ ಮತ್ತು  ಕೆಲವು ರೆಸಿಸ್ಟರು, ಕೆಪಾಸಿಟರುಗಳನ್ನು ಹುದುಗಿಸಲಾಗಿತ್ತು.

ಇದು ಒಂದು sine wave ಅನ್ನು ಉತ್ಪಾದನೆ ಮಾಡ್ತು!

 

ಕಳೆದ ವರ್ಷವೇ ಮೊದಲ ಚಿಪ್ ಗೆ ೫೦ ಆಗಿತ್ತಾದರೂ ಇತರೆ ಬೇರೆ ಕಂಪೆನಿಗಳ ಮೊದಲ ಚಿಪ್ಗೆ ಈ ವರ್ಷದಲ್ಲಿ ೫೦ ತುಮ್ಬುರುವುದರಿಂದ ಈ ವರ್ಷವೂ “IC ಗೆ ಐವತ್ತು” ಅಂತ ಬರೆದು ಖುಷಿ ಪಡೋದರಲ್ಲಿ ತಪ್ಪೇನೂ ಇಲ್ಲ. 😉

Advertisements

ಭಾರತದಲ್ಲೆಲ್ಲಿ ಚಿಪ್ಪುತ್ಪಾದನೆ?


Silicon Wafer

 

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಈ ಸಂದರ್ಭದಲ್ಲಿ ನನ್ನ ತೆಲೆಗೆ ಬಂದ ನಾಲ್ಕು ಮಾತುಗಳನ್ನ ಇಲ್ಲಿ ಬರೀತಾ ಇದ್ದೀನಿ.

 

ನಾವು ಚಿಕ್ಕವರಾಗಿದ್ದಾಗ ಯರೆ ಮಣ್ಣಿನಲ್ಲಿ ಗಾಲಿ ಮಾಡಿಕೊಂಡು ಆಟ ಆಡ್ತಾ ಇದ್ವು. ಆ ಗಾಲಿಯ ತರದ, ದುಂಡಗೆ ಇರುವ, ಸಿಲಿಕಾನ್ ಅನ್ನುವ ಅರೆವಾಹಕ ವಸ್ತುವಿನಿಂದ ಮಾಡಿದ ವಸ್ತುವೇ ಈ wafer. ಇಂತ ವೇಫರ್ಗಳಲ್ಲೇ ನಾವು IC / ಚಿಪ್ಪುಗಳನ್ನು ಎರಕ ಒಯ್ಯುವುದು. ಫೋಟೋದಲ್ಲಿ ನೋಡಿ ಗೊತಾಗುತ್ತೆ.

 

 

ಈ wafer ಅನ್ನುವುದು ಅಪ್ಪಟ ಸಿಲಿಕಾನ್ ವಸ್ತು. ೨೪ ಕ್ಯಾರೆಟ್ ಗೋಲ್ಡ್ ಅಂತೀವಲ್ಲ…ಅಂತಾದ್ದು. ಇದಕ್ಕೆ ಕೆಲವು ವಸ್ತುಗಳನ್ನು ತುರುಕಿ (diffusion) , ಜಡಿದು ( implantation), ಮತ್ತೆ  ಕೆಲವನ್ನು ಸವರಿ (dposition)  ನಂತರ ಕೆರೆದು ( etching),  ಕೊನೆಗೆ ಕತ್ತರಿಸಿ ( assembly),   ಪ್ಯಾಕ್ ಮಾಡಿಯೇ ಕೆಲಸ ಮಾಡುವಂತಹ ಚಿಪ್ಪುಗಳನ್ನು ನಾವು ಪಡೆಯುವುದು.  🙂

 

 

ಸಾಮಾನ್ಯವಾಗಿ ಈ ವೇಫರ ರೂಪ ಯರೆ ಮಣ್ಣಿನ ಗಾಲಿಯಂತೆ ದುಂಡಗೆ ಇರುತ್ತೆ. ಕಾರಣ …ಇದನ್ನು ಉತ್ಪಾದಿಸುವಾಗ ಇದನ್ನು ತಿರುಗಿಸಬೇಕಾಗುತ್ತೆ. ದುಂಡಾಗಿದ್ದರೆ ಅದು ತುಂಡಾಗುವ ಸಾಧ್ಯತೆಗಳು ಬಹಳ ಕಡಿಮೆ. ಮತ್ತು ಒಂದು ಕೊಟ್ಟಿರುವ ಗಾತ್ರಕ್ಕೆ ಹೆಚ್ಚಿನ ಅಚ್ಚು / die ಗಳು ದುಂಡಗಿನ wafer ನಲ್ಲಿ ಬರುತ್ತವೆ.

 

ಇಲ್ಲಿ ಭಾರತದಲ್ಲಿ ಚಿಪ್ಗಳನ್ನು fabricate ಮಾಡುವಂತಹ ಕುಲುಮೆ / foundry ಇರುವುದು ಚಂಡಿಘಡ ದಲ್ಲಿ ಮಾತ್ರ. BEL ನಲ್ಲಿ ಇದೆ ಅಂತಾರೆ .. ಆದ್ರೆ ಅದು ತುಂಬಾ ಚಿಕ್ಕದ್ದು….8 ಮೈಕ್ರೋನ್ ಟೆಕ್ನಾಲಜಿ ಅಂತಾರೆ.. ಸರಿಯಾಗಿ ಗೊತ್ತಿಲ್ಲ.) ಈ SCL ( semiconductors Complex Ltd.) ಕ್ಯಾಂಪಸ್ ನಲ್ಲಿ ಒಂದಾರು ತಿಂಗಳು ಟ್ರೇನಿಂಗ ಪಡೆಯಲು ಸಾಧ್ಯವಾಗಿದ್ದು ನನ್ನ ಅದೃಷ್ಟವೆಂದೇ ನಾನು ಅಂದುಕೊಳ್ಳುತ್ತೇನೆ.

 

SCL ಕೆಲವು ವರ್ಷಗಳಿಂದ ಇಸ್ರೋ ಅಧೀನದಲ್ಲಿದೆ. SCL ನಲ್ಲಿ ಅನಾಲಾಗ್ ರೀತಿಯ ವಿನ್ಯಾಸಗಳಿಗೆ ೧.೨ ಮೈಕ್ರಾನ್ ತಂತ್ರ ಜ್ಞಾನವನ್ನೂ, ಡಿಜಿಟಲ್ ರೀತಿಯ ವಿನ್ಯಾಸಗಳಿಗೆ ೦.೮ ಮೈಕ್ರಾನ್ ತಂತ್ರ ಜ್ಞಾನವನ್ನೂ ಈಗ ಬಳಸುತ್ತಿದ್ದಾರೆ. ಅನೇಕ MNC ಗಳು 32nm, 22nm ಅಂತ ತುಂಬಾ ಸೂಕ್ಷ್ಮ ತಂತ್ರಜ್ಞಾನಕ್ಕೆ ಇಳಿಯುತ್ತಿರುವಾಗ ಕೆಂದ್ರ ಸರ್ಕಾರದ, Dept.of Space ಅಧೀನದ , ಅದೂ ಭಾರತದ ಏಕ ಮಾತ್ರ ಫೌಂಡ್ರಿ …ಏನಪ್ಪಾ ಇನ್ನೂ ಹಳೆಯ ಕಾಲದಲ್ಲಿದೆ ಅಂತೀರ?!… ಇರಲಿ ಬಿಡಿ ನಮ್ಮಲ್ಲಿ ಅಷ್ಟಾದ್ರೂ ಇದೆಯಲ್ವ?!

 

ಹಾ… ಕೊನೆ ವರ್ಷದ ವರೆಗೂ, ಹೈದರಾಬಾದಿನಲ್ಲಿ ಒಂದು ಫ್ಯಾಬ್ ಮಾಡ್ಬೇಕು ಅಂತ ತುಂಬಾ ಯೋಚನೆ ನಡೀತಾ ಇತ್ತು. ಅದು ನಿಂತು ಹೋದಂತೆ ಕಾಣುತ್ತೆ.

 

ಇಲ್ಲಿ SCL ನಲ್ಲಿ ಚಿಪ್ಗಳನ್ನು fabricate ಮಾಡ್ತಾರೆ ನಿಜ. ಆದ್ರೆ ಅವರೂ ಸಹಾ ಈ ಸಿಲಿಕಾನ್ wafer ಗಳನ್ನೂ ಹೊರಗಡೆಯಿಂದ ಆಮದು ಮಾಡಿಕೊಳ್ಳುತ್ತಾರೆ. ಕಾರಣ ಈ ಸಿಲಿಕಾನ್ wafer ನ ಉತ್ಪಾದನಾ ವೆಚ್ಚ! ಅದು ಅಷ್ಟೊಂದು ಕಾಸ್ಟ್ಲಿ!

ಚಿಪ್ ತಂತ್ರಜ್ನಾನ-ಸುಧೀಂದ್ರ ಅವರ ಕನ್ನಡ ಬರಹ-ನನ್ನ ವಿಮರ್ಷೆ!


ಹಾಲ್ದೊಡ್ಡೇರಿ ಸುಧೀಂದ್ರ ಅವರ ದಿನಾಂಕ ಏಪ್ರಿಲ್ ಆರು, ೨೦೦೯ ರ  ಚಿಪ್ ತಂತ್ರಜ್ನಾನಕ್ಕೆ ಹೊಸ ಸಾಧ್ಯತೆ ನೀಡುತ್ತಿರುವ ಸಾಮಗ್ರಿ ನನ್ನ ಗಮನವನ್ನು ಬಹುವಾಗಿ ಸೆಳೆಯಿತು.

ನಾನು ಇದೇ ಕ್ಷೇತ್ರದಲ್ಲಿ ಕಾಯಕ ಮಾಡ್ತ ಇರೋದು. ನಾನೂ ಸಹ ತಂತ್ರಜ್ನಾನದ ಅದರಲ್ಲೂ ಈ ಅರೆವಾಹಕ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಬರೆಯಲು ಪ್ರಯತ್ನ ಮಾಡ್ತಾ ಇದ್ದೇನೆ. ಹಾಗಾಗಿ ಸುಧೀಂದ್ರ ಅವರ ಕನ್ನಡದ ಈ ಬರಹ ಸಹಜವಾಗಿ ನನ್ನ ಗಮನ ಸೆಳೆಯಿತು.

ನಾನು ಇನ್ನೂ ಈ ಕ್ಷೇತ್ರದಲ್ಲಿ ಸರಿಯಾಗಿ ಕಣ್ಣೂ 😉 ಸಹ ಬಿಟ್ಟಿಲ್ಲ. ಹಾಗಾಗಿ ಹಿರಿಯರಾದ ಸುಧೀಂದ್ರ ಅವರ ಬರಹದ ಬಗ್ಗೆ ವಿಮರ್ಶೆ / ಟೀಕೆ ಮಾಡಲು ಹೋಗ್ತಾ ಇಲ್ಲ. ತಪ್ಪು ತೋರಿಸುವುದು ಈ ಬರಹದ ಉದ್ದೇಶವಲ್ಲ. ನಾನು ಕೆಲವೊಂದು ಸನ್ನಿವೇಶಗಳನ್ನು ಅನುಭವಿಸಿದ ಆಧಾರದ ಮೇಲೆ ನನ್ನೆರಡು ಮಾತುಗಳು ಈ ಲೇಖನದ ಬಗ್ಗೆ!

ಈ ಬ್ಲಾಗಿನಲ್ಲಿ ಲೇಖಕರ ಇಂಗ್ಲೀಶಿನ Technical terms ಗೆ ಕನ್ನಡದ (ಪಾರಿಭಾಶಿಕ ಪದಗಳು! ….ಪಾರಿಭಾಶಿಕ ಅಂದ್ರೆ ಏನು?) ಅವರ ಪದಗಳ ಬಗ್ಗೆ ಬಗ್ಗೆ ಬರೆಯುತ್ತ ಇದ್ದೇನೆ.
… content ಅನ್ನೂ ಸೇರಿಸ್ಕೊಂಡು ಇತರೆ ವಿಶಯಗಳ ಬಗ್ಗೆ ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ.

  • ವಿದ್ಯುದಲೆಗಳ ಆವೃತ್ತಿ

ಇಂತಹ ಪದಗಳಿಗೆ ಇಂಗ್ಲೀಷಿನ ಪದಗಳನ್ನೂ ಬ್ರಾಕೆಟ್ನಲ್ಲಿ ಬರೆದರೆ ಅರ್ಥ ಮಾಡಿಕೊಳ್ಳಲು ಸುಲಭ.

>“ಆವೃತ್ತಿ” ಅಂದ್ರೆ ಏನು? Frequency ಅಂತಲೆ!

>“ವಿದ್ಯುದಲೆ” ಪದವನ್ನು ನಾನು ಮತ್ತೆ 😉 ನೇರವಾಗಿ ಇಂಗ್ಲೀಷಿಗೆ ಅನುವಾದ ಮಾಡಿದರೆ current pulse ಅಂತಾಗುತ್ತೆ. ಇಲ್ಲಿ current pulse ಆವೃತ್ತಿ (frequency) ಅಂದ್ರೆ ಏನು?

ನಾನು ಊಹಿಸಬಹುದಾದ (?!) ಮಟ್ಟಿಗೆ “ವಿದ್ಯುದಲೆಗಳ ಆವೃತ್ತಿ” ಅನ್ನುವ ಪದ ಒಂದು ಚಿಪ್ ನ clock speed ಬಗ್ಗೆ ಮಾತಾಡುತ್ತೆ ಅನ್ನಿಸುತ್ತೆ. ಮತ್ತು ಈ ಪದ clock speed ಬಗ್ಗೆ ಮಾತಾಡುವದೇ ಆದರೆ “ವಿದ್ಯುದಲೆ” ಪದ ತಪಾಗುತ್ತೆ ಅನ್ಸುತ್ತೆ.

  • ಅಲೆಗಳ ಕದಡುವಿಕೆ.

Frequency Multiplier ಜೊತೆಯಲ್ಲಿ ಈ ಪದವನ್ನು ಬಳಸಿರುವುದರಿಂದ ನಾನು “ಅಲೆಗಳ ಕದಡುವಿಕೆ” ಪದಕ್ಕೆ Jitter ಅಂತ ಅರ್ಥ ಮಾಡ್ಕೊತೀನಿ. ಅಲ್ದೇ ಹೋದರೆ signal distortion / Wave distortion ಅನ್ನುವ ಪದ ತಲೆಗೆ ಬರುತ್ತೆ. ಮತ್ತು ಎರಡೂ ಪದಗಳಿಗೆ ತುಂಬಾ ವ್ಯತ್ಯಾಸವಿದೆ.

  • ಸೋಸುಕ

ಬಹುಶ ಇದು filter ಪದಕ್ಕೆ ಬದಲಾಗಿ ಬಳಸಿದ್ದಾರೆ ಅನ್ಸುತ್ತೆ. ಯಾಕೋ ಈ ಪದ ತುಂಬಾ ಕೃತಕ ಅಂತ ನನಗೆ ಅನ್ನಿಸುತ್ತೆ. ( ನಮ್ಮಲ್ಲಿ ಈ ಪದ ಬಳಕೆಯಲ್ಲಿ ಇಲ್ಲದೇ ಇರುವುದಕ್ಕೆ ಇರಬಹುದು;) ) ಈಗಾಗಲೆ ಬಳಕೆಯಲ್ಲಿರುವ “ಜಾಲರಿ” ಪದವೂ ಒಪ್ಪುತ್ತೆ.

  • Processor

ಪದವನ್ನು ಹಾಗೇಯೇ ನೇರವಾಗಿ ಬಳಸಿದ್ದಾರೆ. ಸಂಪದದಲ್ಲಿಯೇ ಈ ಮುಂಚೆ ಬಳಸಲ್ಪಟ್ಟ “ಸಂಸ್ಕಾರಕ” ಪದ ಒಪ್ಪುತ್ತೇ ಅನ್ನಿಸುತ್ತೆ. ( ಹಾ ಬ್ರಾಕೆಟ್ನಲ್ಲಿ ಇಂಗ್ಲೀಶಿನ ಪದವನ್ನು ಒಮ್ಮೆಯಾದರೊ ಕೊಡಬೇಕು).

  • ಚಿಪ್

ಲೇಖನದ ಮೊದಲಲ್ಲೇ “ಕಂಪ್ಯೂಟರಿನ ಮಿದುಳಾದ ಸಿ ಪಿ ಯು ಅನ್ನು ಮುದ್ದಾಗಿ “ಚಿಪ್” ಎಂದು ಕರೆಯುವ ವಾಡಿಕೆಯಿದೆ” ಅಂತ ಇದೆ. ಇದು ಅಷ್ಟೊಂದು ಸರಿಯಾದ ವಾಕ್ಯವಲ್ಲ.. ಮತ್ತು ಓದುಗರನ್ನು mislead ಮಾಡುವ ಸಾಧ್ಯತೆ ಇದೆ.

ಈ ಬರಹಕ್ಕೆ ಇನ್ನೂ ಹೆಚ್ಚಿನ ವಷಯವನ್ನು ಮುಂದಿನಬ್ಲಾಗಿನಲ್ಲಿ ಸೇರಿಸಲು ಯೋಚಿಸ್ತಾ ಇದ್ದೀನಿ.

Note: ಈ ಬ್ಲಾಗಿನ ಉದ್ದೇಶ ಕನ್ನಡದಲ್ಲಿ ತಂತ್ರಜ್ನಾನದ ಬಗೆಗಿನ ಚರ್ಚೆಗೆ ನನ್ನೊಂದಿಷ್ಟು ಮಾತು ಸೇರಿಸುವುದಷ್ಟ್ಟೇ… ಟೀಕೆಗಾಗಿ ಈ ಬ್ಲಾಗು ಅಲ್ಲ.

DC DC Converter!


ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧುನಿಕ  ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ ( power) ಪೂರೈಕೆಯಾಗಬೇಕಾಗುತ್ತೆ.

  • ಇಂತಹ ಮಿಮ್ಬಲ್ಮೆ (?!) ಉಪಕರಣಗಳು (ಇಲೆಕ್ಟ್ರಾನಿಕ್ items) ಸಾಮಾನ್ಯವಾಗಿ ಹಲವು ಉಪ ಸರ್ಕ್ಯುಟ್ ಗಳನ್ನು ಹೊಂದಿರುತ್ತೆ ಮತ್ತು ಅವು ಒಂದಕ್ಕಿಂತ ಒಂದು ಬೇರೆ ಬೇರೆ ಶಕ್ತಿ ಪೂರೈಕೆ ( power supply )ಯಿಂದ ಕೆಲಸ ಮಾಡುವಂತವು ಆಗಿರಬಹುದು.

ಇಂತಹ ಸಂದರ್ಭದಲ್ಲಿ, ಇರುವ ಒಂದು ವೋಲ್ಟೇಜು ಮಟ್ಟವನ್ನು ಉಪ ಸರ್ಕ್ಯುಟ್ ಗಳಿಗೆ ಬೇಕಾದ ಬೇರೆ ಬೇರೆ ವೋಲ್ಟೇಜು ಮಟ್ಟಕ್ಕೆ (ಗಳಿಗೆ) ಬದಲಾಯಿಸುವ ಕೆಲಸವನ್ನು ಈ DC DC converter ಮಾಡುತ್ತೆ.

  • ಈ ಸಾಧನಗಳು ಬ್ಯಾಟರಿಯಲ್ಲಿನ ಕಲೆಹಾಕಿದ ಶಕ್ತಿಯನ್ನು ಬಳಸಿಕೊಂಡು ಕೆಲಸಮಾಡುತ್ತವೆ. ಮತ್ತು ಈ ಶಕ್ತಿಯು ಹೆಚ್ಚು ಬಳಸಲ್ಪಟ್ಟಂತೆ ಬ್ಯಾಟರಿಯ ವೋಳ್ಟೇಜು ಕಡಿಮೆ ಆಗುತ್ತಾ ಹೋಗುತ್ತೆ.

ಇಂತಹ ಸಂದರ್ಭದಲ್ಲಿ.. ಭಾಗಶ: ಕಡಿಮೆಯಾದ ಬ್ಯಾಟರಿಯ ವೋಳ್ಟೇಜನ್ನು, DC DC converter ಮೊದಲಿನ ಮಟ್ಟಕ್ಕೆ ತರುತ್ತೆ. ಹಾಗಾಗಿ ಎರೆಡೆರಡು ಬ್ಯಾಟರಿ ಬಳಸುವ ಅತ್ವ ಮತ್ತೆ ಚಾರ್ಜ್ ಮಾಡುವ ಕೆಲಸ ತಪ್ಪುತ್ತೆ.

….ಒಂದು ಸರ್ಕ್ಯುಟ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು Voltage Doubler ಹೇಗೆ ಕೆಲಸ ಮಾಡುತ್ತೆ ಅಂತ ಮುಂದೆ ಸೇರುಸ್ತೀನಿ.

ಮೂರ್ ನ ಕಟ್ಟಳೆ


ಗಾರ್ಡೆನ್ ಮೂರ್

ಗಾರ್ಡೆನ್ ಮೂರ್

Moore’s law, ಮೂರ್ಸ್ ಲಾ, ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! 😉

ಈ “ಮೂರ್ ನ ಕಟ್ಟಳೆ” ಅನ್ನುವುದು ಒಂದು ರೀತಿ empirical ಫಾರ್ಮುಲ. ಅಂದ್ರೆ ಅನುಭವದಿಂದ ಗಮನಕ್ಕೆ ಬಂದಿದ್ದು. ಯಾವುದೇ ಲೆಕ್ಕ , ಫಾರ್ಮುಲಗಳು ಇಲ್ಲಿ ಈ ಸಂಬಂಧವನ್ನು ಸಾಧಿಸುವಲ್ಲಿ ಪ್ರಾಮುಖ್ಯತೆ ವಹಿಸಲ್ಲ.

ಈ ಕಟ್ಟಳೆ ಏನು ಹೇಳುತ್ತಪ್ಪ ಅಂದ್ರೆ ” ಒಂದು ಅಚ್ಚಿನಲ್ಲಿ (die) ಎರಕ ಒಯ್ಯಬಹುದಾದ ಟ್ರಾನ್ಸಿಸ್ಟರುಗಳ ಸಂಖ್ಯೆ ಪ್ರತಿ ಒಂದೊವರೆ ವರ್ಷಕ್ಕೆ ದುಪ್ಪಟ್ಟಾಗುತ್ತೆ .” ಇದನ್ನು ಒಂದು ರೀತಿಯಲ್ಲಿ exponential ಬೆಳವಣಿಗೆ ಅನ್ನಬಹುದು.

ಗಾರ್ಡೆನ್ ಮೂರ್ ಅನ್ನುವ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಈತ ಇಂಟೆಲ್ ನ ಸಂಸ್ಥಾಪಕರಲ್ಲಿ ಒಬ್ಬ. ಮೂರ್ ನ ಕಟ್ಟಳೆ ಅನ್ನುವ “ಪ್ರವೃತ್ತಿ” ಯನ್ನು ೧೯೬೫ ರಲ್ಲೇ ಈತ ಊಹಿಸಿದ್ದ. ಆಗ ಬಂದ ಈತನ ಈ ಬರಹವೇ ಮೂರ್ ನ ಕಟ್ಟಳೆಗೆ ಮೂಲ ಅನ್ನುವುದು ಅನೇಕರ ಅನಿಸಿಕೆ.

ಈ ಪ್ರವೃತ್ತಿ ಮುಖ್ಯವಾಗಿ ಚಿಪ್ ಒಳಗಿನ ಟ್ರಾನ್ಸಿಸ್ಟರುಗಳು, ತಂತಿಗಳು ಮುಂತಾದ ಇತರ ಘಟಕಗಳು ಗಾತ್ರದಲ್ಲಿ ಕುಗ್ಗುವ ಕಾರಣದಿಂದ ಕಂಡುಬರುತ್ತೆ.

feature size ಅನ್ನುವುದು ಚಿಪ್ ನಲ್ಲಿ, ಒಂದು lithography ತಂತ್ರಜ್ಞಾನದಿಂದ ಎಳೆಯಬಹುದಾದ ಅತ್ಯಂತ ಸಣ್ಣ(ತೆಳ್ಳನೆಯ)ಗೆರೆ / ಕನಿಷ್ಟ ಗಾತ್ರದ ಆಕೃತಿಯ ಉದ್ದ ಅನ್ನಬಹುದು. ಇದು ಸಾಮಾನ್ಯವಾಗಿ ಒಂದು ಕನಿಷ್ಠ ಗಾತ್ರದ MOS ಟ್ರಾನ್ಸಿಸ್ಟರ್ ನ ಉದ್ದಕ್ಕೆ ಸಮವಾಗಿರುತ್ತೆ. ಅಂದರೆ ಈ ಉದ್ದಕ್ಕಿಂತ ಕಡಿಮೆ ಉದ್ದದ (ಅತ್ವ ಗಾತ್ರದ) ಟ್ರಾನ್ಸಿಸ್ಟರ್ ಅನ್ನು ಎರಕ ಒಯ್ಯಲು ಆಗದು. ಈ feature size ಕಡಿಮೆ ಆದಂತೆ ಹೆಚ್ಚು ಹೆಚ್ಚು ಟ್ರಾನ್ಸಿಸ್ಟರ್ ಗಳನ್ನು ಸಿಲಿಕಾನ್ ಅಚ್ಚಿನ ಮೇಲೆ ಎರಕ ಒಯ್ಯಲು ಸಾಧ್ಯವಾಗುತ್ತೆ.

“CMOS 130nm”, “90nm process”, “45nm CMOS Technology” ಹೀಗೆ ನೀವು ಪದಗಳನ್ನು ಕೇಳಿರುತ್ತೀರಿ. ಈ ನ್ಯಾನೋಮೀಟರ್ (nm) ಅಂತ ಬಳಸುವ ತಂತ್ರಜ್ಞಾನಗಳು ಎರಕ ಒಯ್ಯುವ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತಹ feature size ಉದ್ದವೇ 🙂 .

ಮೂರ್ ನ ಕಟ್ಟಳೆ plot

ಮೂರ್ ನ ಕಟ್ಟಳೆ plot

CMOS ಶೈಲಿ / ತಂತ್ರಜ್ಞಾನ


CMOS , ಕನ್ನಡದಲ್ಲಿ ಹೇಳಿವಾಗ ಸೀಮಾಸ್ ಅಂತ ಹೇಳುತ್ತೇವೆ. CMOS ಅನ್ನುವುದು “ಶೈಲಿ” ಮತ್ತು “ತಂತ್ರಜ್ಞಾನ” ಎರಡಕ್ಕೂ ಸಂಬಂಧಿಸಿದ್ದು.

……………………………………….

ಹಿನ್ನಲೆ

ಐ ಸಿ ( Integrated Circuit) ಅನ್ನೇ ನಾವು ಆಡುಭಾಷೆಯಲ್ಲಿ ಚಿಪ್ (chip) ಅಂತೀವಿ. ಈ ಅರೆವಾಹಕ ಸಲಕರಣೆ ಒಂದಕ್ಕೊಂದು ಜೋಡಣೆ ಹೊಂದಿರುವ ಟ್ರಾನ್ಸಿಸ್ಟರ್ಗಳ , ರೆಸಿಸ್ಟರ್ ಗಳ, ಕೆಪಾಸಿಟರ್ ಗಳ ( ಡೈಯೋಡ್ ಮತ್ತು ಇಂಡಕ್ಟರ್ ಗಳು ಇತ್ಯಾದಿ) ಗುಂಪನ್ನು ಹೊಂದಿರುತ್ತೆ.

ಸಾಮಾನ್ಯವಾಗಿ ಈ ಚಿಪ್ಗಗಳನ್ನು ಸಿಲಿಕಾನ್ (silicon) ಅನ್ನುವ ಅರೆವಾಹಕ ವಸ್ತುವಿನಿಂದ ಮಾಡುತ್ತಾರೆ. ಸಿಲಿಕಾನ್ ಅಲ್ಲದೆ ಇತರೆ ಅರೆವಾಹಕಗಳಿಂದ ಮಾಡಿದರೂ ಸಿಲಿಕಾನ್ ಇಂದ ಮಾಡಿದ ಚಿಪ್ಗಳೇ ಹೆಚ್ಚು!.

ಮರಳು ಗೊತ್ತಲ್ವಾ?! ಅದರಿಂದಾನೇ ಈ ಸಿಲಿಕಾನ್ ಅನ್ನು ಹೊರ ತೆಗಿತಾರೆ. ಇಂತಾ ಮಣ್ಣಿನ (?!) ತಟ್ಟೆಯಲ್ಲಿ ನಮ್ಮ ಪ್ರೋಸೆಸ್ಸರ್ ಗಳೇ ಮುಂತಾದ ಚಿಪ್ ಗಳನ್ನು ಹೆಂಗೆ ಮಾಡ್ತಾರೆ?! ಅನ್ನುವುದು ಹೀಗಿನ ಪ್ರಶ್ನೆ!.

ಚಿಪ್ ಒಳಗೆ ಟ್ರಾನ್ಸಿಸ್ಟರಗಳನ್ನು ಮತ್ತು ಇತರ ವಸ್ತುಗಳನ್ನು ತಾಮ್ರದಿಂದ ಒಂದಕ್ಕೊಂದು ಸೇರಿಸಬಹುದು, ಆದರೆ ಮಣ್ನಿನ ತಟ್ಟೆಯಲ್ಲಿ ಈ ಟ್ರಾನ್ಸಿಸ್ಟರ್ ಗಳನ್ನು ಯಾವ ವ್ಯೂಹದಲ್ಲಿ ಇಡುವುದು ಮತ್ತು ಅವನ್ನು ಹೆಂಗೆ “ಬಳಸಿಕೊಳ್ಳುವುದು”?!

ಅಂತ ಒಂದು ತಂತ್ರಜ್ನಾನವೇ ಈ ಸೀಮಾಸ್! (CMOS)

……………………………………….

“ಸೀಮಾಸ್ ಶೈಲಿ”

CMOS ಅನ್ನುವುದು Complementary Metal Oxide Semiconductor ಅನ್ನುವುದರ ಚಿಕ್ಕ ರೂಪ. PMOS (ಪೀಮಾಸ್) ಟ್ರಾನ್ಸಿಸ್ಟರ್ ಮತ್ತು NMOS (ಎನ್ಮಾಸ್) ಟ್ರಾನ್ಸಿಸ್ಟರ್ ಅಂತ ಎರಡು ಮೂಲ ರೀತಿಯ ಟ್ರಾನ್ಸಿಸ್ಟರ್ ಗಳು ಇವೆ. ಇವೆರಡೂ ಸ್ವಿಚ್ಚುಗಳು. ಈ ಸ್ವಿಚ್ಚುಗಳನ್ನು ಬಳಸಿಕೊಂಡೇ ನಾವು ಡಿಜಿಟಲ್ ಲಾಜಿಕ್ ( ಮತ್ತು ಅನಲಾಗ್ ಭಾಗಗಳನನ್ನು) ಅನ್ನು ಅಸ್ತಿತ್ವಕ್ಕೆ ತರುತ್ತೇವೆ.

(ಇದಲ್ಲದೇ ಬೇರೆ ರೀತಿಯೂ ಅನಲಾಗ್ circuit ಗಳನ್ನು ಅತ್ವ ಯಾವುದೇ ಡಿಜಿಟಲ್ ಭಾಗಗಳನ್ನು ವಿನ್ಯಾಸ ಮಾಡಬಹುದು. ಉದಾಹರಣೆಗೆ ಎನ್ಮಾಸ್(NMOS) ಲಾಜಿಕ್ ( ಎನ್ಮಾಸ್ ತಂತ್ರಜ್ನಾನ). ಇಲ್ಲಿ ಕೇವಲ ಎನ್ಮಾಸ್ ಟ್ರಾನ್ಸಿಸ್ತರ್ (ಜೊತೆಗ್ ಸ್ವಲ್ಪ ರೆಸಿಸ್ಟರ್) ಗಳನ್ನೇ ಬಳಸಿಕೊಂಡು ಡಿಜಿಟಲ್ ಲಾಜಿಕ್ ಭಾಗಗಳನ್ನು ವಿನ್ಯಾಸ ಮಾಡಬಹುದಾರೂ ಅದಕ್ಕೇ ತನ್ನದೇ ಆದ ಮಿತಿಗಳಿವೆ).

CMOS ತಂತ್ರಜ್ಞಾನದಲ್ಲಿ ಮುಖ್ಯವಾಗಿ ಎರಡು ರೀತಿಯ “ಮೂಲ” ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತೇವೆ. ಜೊತೆಯಲ್ಲೇ ಇತರೆ (ಉದಾ. ಬೈಪೋಲಾರ್ (BJT) ) ಟ್ರಾನ್ಸಿಸ್ಟರ್ ಗಳನ್ನು ಅಸ್ತಿತ್ವಕ್ಕೆ (fabricate), ಕಾರ್ಯರೂಪಕ್ಕೆ ತರಬಹುದಾದರೂ ,ಇದು ನಂತರದ ಬೆಳವಣಿಗೆ.

ಒಂದು ಡಿಜಿಟಲ್ ಲಾಜಿಕ್ ಅನ್ನು ಉದಾಹರಣೆಯಾಗು ತೆಗೆದುಕೊಂದು ನಾವು CMOS –ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಬಹುದು.

ಈ CMOS ತಂತ್ರಜ್ನಾನದಲ್ಲಿ ಎನ್ಮಾಸ್ ಮತ್ತು ಪೀಮಾಸ್ ಅಂತ ಎರಡು ಟ್ರಾನ್ಸಿಸ್ಟರ್ ಬಳಸುತ್ತೇವೆ.

n-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ (n ಅಂದ್ರೆ negative ) ಎಲೆಕ್ತ್ರಾನ್(electron)ಗಳು ವಿದ್ಯುತ್ ಹರಿಯಲು ಕಾರಣವಾಗುತ್ತವೆ. ಆದರೆ ಇವು ಲಾಜಿಕ್-ಸೊನ್ನೆ ಅನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್-ಒಂದು ಅನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ಸೊನ್ನೆ ವೋಲ್ಟೇಜ್ ಬರೋ ಜಾಗದಲ್ಲಿ ಸೊನ್ನೆ ವೋಲ್ಟೇಜ್ ಬಂದರೂ ೫ ವೋಲ್ಟೇಜ್ ಬರುವ ಜಾಗದಲ್ಲಿ ೪.೩ ವೋಲ್ಟೇಜ್ ಬರಬಹುದು.

p-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ ( p ಅಂದ್ರೆ positive ) ಹೋಲ್(hole)ಗಳು ವಿದ್ಯುತ್ ಹರಿಯಲು ಕಾರಣವಾಗುತ್ತವೆ. ಇವು ಲಾಜಿಕ್-ಒಂದು ಅನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್-ಸೊನ್ನೆ ಅನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ಈ ಪೀಮಾಸ್ ಟ್ರಾನ್ಸಿಸ್ಟರಗಳು ೫ ವೋಲ್ಟಗಳು ಬರೋ ಜಾಗದಲ್ಲಿ ೫ ವೋಲ್ಟಗಳು ಬರುವಂತೆ ಮಾಡಿದರೂ ಸೊನ್ನೆ ವೋಲ್ಟೇಜ್ ಬರುವ ಜಾಗದಲ್ಲಿ ೦.7 ವೋಲ್ಟೇಜ್ ಬರುವಂತೆ ಮಾಡುತ್ತವೆ!

ಈಗ ಈ ಡಿಜಿಟಲ್ ಲಾಜಿಕ್ ಅಸ್ತಿತ್ವ ಕ್ಕೆ ಬರಲು ( ಪೂರ್ತಿ ಸೊನ್ನೆ ಮತ್ತು ಪೂರ್ತಿ ೫ ವೋಲ್ಟಗಳು) ಇವೆರಡನ್ನೂ ಬಳಸಿದರೆ ಹೆಂಗೆ?!

ಇಲ್ಲೇ ಬರುವುದು ಈ ಸೀಮಾಸ್ ಕಲ್ಪನೆ! 🙂

ಪೀಮಾಸ್ ಮತ್ತು ಎನ್ಮಾಸ್ಗಳು ಒಂದಕ್ಕೊಂದು ಪೂರಕವಾಗಿರುತ್ತವೆ (complementary) . ಸೊನ್ನೆ ಲಾಜಿಕ್ಕನ್ನು ಎನ್ಮಾಸ್ ಟ್ರಾನ್ಸಿಸ್ಟರಗಳು ಮತ್ತು ಪೀಮಾಸ್ ಟ್ರಾನ್ಸಿಸ್ಟರಗಳು ಒಂದು ಲಾಜಿಕ್ ಅನ್ನು ಅಸ್ತಿತ್ವಕ್ಕೆ ತರುತ್ತವೆ. ಈ ರೀತಿ ಎರಡು ರೀತಿಯ “ಮಾಸ್ (MOS)” ಟ್ರಾನ್ಸಿಸ್ಟರಗಳು ಅನ್ನು ಒಂದಕ್ಕೊಂದು “ಪೂರಕ”ವಾಗಿ ಬಳಸುವುದರಿಂದ ಈ “ರೀತಿ”ಗೆ / “ಶೈಲಿ”ಗೆ CMOS ಶೈಲಿ ಅನ್ನಬಹುದು.

ಮೇಲಿನ ಲೇಖನದಲ್ಲಿ ಶೈಲಿ / ರೀತಿ ಯ ಬಗ್ಗೆ ಸ್ವಲ್ಪ ಬರೆದಿದ್ದೇನೆ.

……………………………………….

CMOS ತಂತ್ರಜ್ಞಾನ!

CMOS ತಂತ್ರಜ್ಞಾನ fabrication ಗೆ ಸಂಬಂಧಪಟ್ಟಿದ್ದು. ಯಾವ ತಂತ್ರಜ್ಞಾನ / ಟೆಕ್ನಾಲಜಿ /ಪ್ರೋಸೆಸ್ಸ್ ಪೀಮಾಸ್ ಮತ್ತು ಎನ್ಮಾಸ್ ಎರಡೂ ಟ್ರಾನ್ಸಿಸ್ಟರಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತೋ ಅಂತ ತಂತ್ರಜ್ಞಾನವನ್ನು CMOS ತಂತ್ರಜ್ಞಾನ ಅನ್ನಬಹುದು .

……………………………………….

ಇತರೆ.

1. ಎರಡು ರೀತಿಯ ಟ್ರಾನ್ಸಿಸ್ಟರುಗಳ ಬಗ್ಗೆ ಹಿಂದೊಮ್ಮೆ ಇಲ್ಲಿ ಬರೆಯಲು ಪ್ರಯತ್ನಿಸಿದ್ದೆ

2. ಲಾಜಿಕ್ ಸೊನ್ನೆ(logic zero) ಅಂದ್ರೆ ಸೊನ್ನೆ ವೋಲ್ಟ್.
ಲಾಜಿಕ್ ಒಂದು (logic one) ಅಂದ್ರೆ ೫ ವೋಲ್ಟ್ (ಆ ಚಿಪ್ / ಸರ್ಕ್ಯುಟ್ ೫ ವೋಲ್ಟಗಳಲ್ಲಿ ಕೆಲ್ಸ ಮಾಡುತ್ತೆ ಅನ್ನುವುದಾದರೆ) .

3. ವಿಕಿಪೀಡಿಯಾದಲ್ಲಿ ನೋಡಿ