Home » ನನ್ ಬಗ್ಗೆ!

ನನ್ ಬಗ್ಗೆ!

Advertisements

ನಿಮ್ಮ ಬಗ್ಗೆ  ಎರಡ್ಮಾತು!

ನನ್ನ ನಿಜ ಹೆಸರನ್ನು ಇಂಗ್ಲೀಷಿಗೆ ಭಾಷಾಂತರ ಮಾಡಿದರೆ ಹೀಗೆ ಹೇಳಬಹುದು.
“The Light in the Darkness”.

ನಾನು ಚಿಪ್ ಡಿಸೈನ್ (VLSI) ನಲ್ಲಿ ಕಾಯಕ ಮಾಡುವಂತವನು. Analog & Mixed signal Design (AMS) ನನ್ನ ಕಾರ್ಯ ಕ್ಷೇತ್ರ.. PLL design, High Voltage design ನಾನು ಇದುವರೆಗೆ ಕೆಲಸ ಮಾಡಿರುವ / ಮಾಡುತ್ತಿರುವ ಕ್ಷೇತ್ರಗಳು.

ಶರಣರ ವಚನಗಳು ನಾನು ತುಂಬಾ ಇಷ್ಟಪಡುವಂತಹ ಸಾಹಿತ್ಯ. ವೇದಗಳು ಮತ್ತು ಉಪನಿಶತ್ತುಗಳಲ್ಲಿಯೂ ಸ್ವಲ್ಪ ಆಸಕ್ತಿ.
…………….
ನಾನು ನನ್ನ ಬ್ಲಾಗಿನ ಹೆಸರನ್ನು “ಚಿಪ್ ಒಳಗಣ ಚುಳುಕು” ಅನ್ನೋ ಕಾರಣ ಈ ಸಂಬಂಧಪಟ್ಟಿದ್ದೆ!
…………….
ನಾನು ಕಾಯಕ ಮಾಡುವ ಕ್ಷೇತ್ರ ವನ್ನು ಈ ಚಿಪ್ ಹೇಳುತ್ತೆ.
ಚುಳುಕು ವಚನಗಳಲ್ಲಿನ ನನ್ನ ಆಸಕ್ತಿಯನ್ನು ಪ್ರತಿನಿಧಿಸುತ್ತೆ.
…………….

ಈಗೊಂದು ಬಸವಣ್ಣನ ವಚನವಿದೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಳದಿಂದತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ , ಕೂಡಲಸಂಗಮ ದೇವ
ಎನ್ನ ಕರಸ್ಥಲಕೆ ಬಂದು ಚುಳುಕಾದಿರಯ್ಯ

ಆ ಎಲ್ಲೆಯಿರದ ಪರವಸ್ತು/ಪರಶಿವ /ಪರಬ್ರಹ್ಮ ಚುಳುಕಾಗಿ ತನ್ನ ಕರಸ್ಥಲಕ್ಕೆ ಬಂದಿದ್ದನ್ನು ಬಸವಣ್ಣ ಇಲ್ಲಿ ಹೇಳುತ್ತಾನೆ.

ಬಹುಶ ನಮ್ಮ IT revolution ಗೆ , Electronics ಕ್ರಾಂತಿಗೆ ಈ ಚಿಪ್ ಗಳೇ ನೇರ ಕಾರಣ. ಈ ಚಿಪ್ನೊಳಗೆ ಹರಿದಾಡುತ್ತಿರುವ Voltage / current .. ಮತ್ತು ಇನ್ನೂ ವಿವರವಾಗಿ ಹೋದರೆ electronಗಳು (ಮತ್ತು Hole ಗಳು) ಅನ್ನು ಒಂದು ಶಕ್ತಿಯೆಂದೆ ಕರೆಯಬೇಕು.

ಮತ್ತು ನಾನು ಅದನ್ನೇ “ಚುಳುಕು” ಅಂದುಕೊಂಡಿದ್ದೇನೆ. ಇಲ್ಲಿ ನಾನು ಚುಳುಕು ಪದವನ್ನು “ಹೋಲಿಕೆ”ಗಾಗಿ ಬಳಸಿದ್ದೇನೆಯೇ ಹೊರತು ನೇರ ಅರ್ಥ ಅದಲ್ಲ.

…………….

ಮತ್ತು ಇಲ್ಲಿ ಈ ಬ್ಲಾಗಿನಲ್ಲಿ ನನ್ನ VLSI ಕ್ಷೇತ್ರದ, ವಚನಗಳ, ವೇದಗಳ, ಉಪನಿಷತ್ತುಗಳ ಮತ್ತು ನನ್ನ ವೈಯಕ್ತಿಕ ಬದುಕಿನ ಕೆಲ ಅನುಭವಗಳ ಬಗ್ಗೆ ಬರೀತಾ ಇದ್ದೇನೆ.

ನನ್ನಿಷ್ಟದ ವಚನಗಳ ಬಗ್ಗೆ ಓದಲು / ಕೇಳಲು ಇಲ್ಲಿ ಬೇಟಿ ಕೊಡಿ.
http://savithru.blogspot.com/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: