Advertisements

ಮೊಬೈಲ್ನಿಂದ ಬರೆದ ಮೊದಲ ಬ್ಲಾಗು. Read kannada in android mobile without jail breaking


ನಾನು ಅಂಡ್ರಾಯ್ಡ ಮೊಬೈಲ್ ಬಳಸಕ್ಕೆ ಶುರು  ಮಾಡಿ ಸುಮಾರು  ಒಂದೆರಡು ತಿಂಗಳುಗಳೆ ಆಯ್ತು..
ನನ್  ಮೊಬೈಲ್ ತಗೊಂಡ ಮೊದಮೊದಲು ಹುಡಕಿದ್ದೇ ಕನ್ನಡ ಹೇಗೆ ಬರಿಯೋದು , ಓದೋದು ಅಂತ. ಒಪೆರ ಮಿನಿ ಬ್ರವ್ಸರ್ನಲ್ಲಿ ಮಾತ್ರ ಕನ್ನಡ ಹೇಗೆ “ಓದೋದು ” ಅಂತ ಗೊತ್ತಾದ್ರೂ  … ಹೇಗೆ  “ಬರಿಯೋದು “ಅಂತ ಮಾತ್ರ ಗೊತ್ತಾಗಿರ್ಲಿಲ್ಲ.

ಇನ್ ಫ್ಯಾಕ್ಟ್ , ಆಂಡ್ರಾಯ್ಡ್ ನಲ್ಲಿ ಕನ್ನಡದ ಯುನಿಕೋಡ್ ಫಾಂಟ್ ಸಪೋರ್ಟ ಇರಲೇ  ಇಲ್ಲ.  ಈಗ್ಲೂ ಇಲ್ಲ.

ಇತ್ತೀಚೆಗೆ ಕೆಲ ಸ್ಯಾಮ್ಸಂಗ್, ಸೋನಿ ಎರಿಕ್ಸನ್ನ ಹ್ಯಾಂಡ್ಸೆಟ್ ಗಳು flipfont ಗಳನ್ನ ಸಪೋರ್ಟ ಮಾಡ್ತವೆ. ಅರ್ತಾತ್ ಅವುಗಳಲ್ಲಿ flipfont library ಇರುತ್ತೆ. ಇಂತ ಮೊಬೈಲ್ಗಳಲ್ಲಿ  ನಾವು ಕನ್ನಡ ಓದಬಹುದು. (ಇಲ್ಲ ಅಂದ್ರೆ ನಿಮ್ಮ ಮೊಬೈ ಲನ್ನು  root ಮಾಡ್ಬೇಕಾಗುತ್ತೆ.)

ನಿಮ್ಮ ಮೊಬೈಲ್ನಲ್ಲಿ   flip font facility ಇದ್ರೆ, ನೇವು fonts for galaxy sp ಅನ್ನೊ  ಆಂಡ್ರಾಯ್ಡ್ ಅಪ್ಲಿಕೇಶನ್ ಹಾಕೊಂಡು  ಅದರ ಮೂಲಕ akshar.ttf (akshar.apk) ಅನ್ನೊ ಫಾಂಟ್ಸಗಳನ್ನ ‘ಇನ್ಸ್ಟಾಲ್ ‘ ಮಾಡ್ಕೋಬೇಕು.  ನಂತರ settings ಗೆ ಹೋಗಿ display ಒಳಗೆ fontstyle ಅನ್ನು ‘akshar’ ಗೆ ಬಾದಲಾಯಿಸಿ.   ಈಗ ನೋಡಿ!!! ನಿಮ್ಮ ಮೊಬೈಲ್ ನಲ್ಲಿ   ಕನ್ನಡ. ವನ್ನು ಓದಬಹುದು.

ಇಲ್ಲಿ ನಾವು ಏನು ಗಮನಿಸ್ಬೇಕು ಅಂದ್ರೆ … ಇನ್ನೂ ಯಾವ ಆಂಡ್ರಾಯ್ಡ್ ಸೆಟ್ಗಳಲ್ಲೂ complex font rendaring capability ಇಲ್ಲ. ಹಾಗಾಗಿ ನಾವು ಒತ್ತಕ್ಷರಗಳನ್ನಾ ಸರಿಯಾಗಿ ಬರೆಯಲಿ ಅಗಲ್ಲ.

ಇದಿಶ್ಟೂ ಕನ್ನಡ ಓದೋದ್ರ ಬಗ್ಗೆ ಅಯ್ತು. ಇನ್ನು ಕನ್ನಡ ಟೈಪು  ಮಾಡಕ್ಕೆ ನಮ್ಮ ಕನ್ನಡದ ಹುಡುಗ್ರೇ  ಎರಡ್ಮೂರು ಕನ್ನಡ ಕಿಪ್ಯಾಡ್ ಮಾಡಿದ್ದಾರೆ. ಅವುನ್ನ ನಿಮ್ಮ ಮೊಬೈಲ್ಗೆ ಹಾಕಿಕೊಂಡ್ರೆ ಅಯ್ತು.

ನಾನು ಸದ್ಯಕ್ಕೆ Kannada for any soft keyboard’ ಅನ್ನೋದನ್ನಾ ಕನ್ನಡ ಬರಿಯಕ್ಕೆ ಬಳಸ್ತಾ ಇದೀನಿ.

…………

 

 

image

image

For those who can’t read kannada, here is the write up in english.

…….

It is very unfortunate that android does not support unicode kannada fonts inherently. Hence we cannot read (& ofcourse cannot write) kannada over android phones.

In opera browser, there is a workaround to read kannada.
i.e.
>Open your opera browser then
>type about: config and then enter to see some power user settings.
At the end you can see an option to “deliver complex scripts as bitmap fonts”. Make it “yes” then save the settings, and close the browser.
Next time if you open any kannada site, you can clearly read kannada. however you cannot type kannada here.

Recently, I found an application called “fonts for galaxy sp” in android market, which has an interesting font in its collection.

Very interesting thing about this is, if your mobile has flip fonts library, then there is no need to root your mobile to install your (kannada) fonts.

(generally fonts are stored in the folder /system/fonts/ . Since a normal user don’t have access or edit permissions to this folder, we have to go for rooting , to gain the root / administrative access to this folder).

Well, coming back to the topic, the guy who created the above app, some how managed to add our external fonts to be visible in the list of font choices to the mobile.

Install akshar.ttf from the list of his fonts, and then go to
>Settings
>display
>screen display
>font style
Here choose the font akshar as the font to be used by your mobile.

And now!!! Open any kannada site, you can see and read kannada.

One must keep in mind that, even today none of android handsets are capable of complex font rendering. Hence complex conjugate words are displayed as broken words. Lets hope that this problem will be solved ASAP.

……
Well, this is about reading. And how about typing kannada?!.

as of now there are 3 kannada key boards available in the market.
1. Kannada for anysoftkeyboard
2. Panini kannada keyboard
3. Kannada-hindi keyboard.

I am using the “kannada for anysoftkeyboard” to write this blog.

Advertisements

ಮೊತ್ತ ಮೊದಲ ಮೈಕ್ರೋ ಚಿಪ್


 FirstIC

 

 ೧೨ September ೧೯೫೮

ಈ ದಿನಾಂಕದ್ದು ಏನಪ್ಪಾ ವಿಶೇಷ ಅಂದ್ರೆ ….Texas Instruments ನ ಜಾಕ್ ಕಿಲ್ಬಿ (Jack Kilby ) ಅನ್ನುವವನು ಜಗತ್ತಿನ ಮೊತ್ತ ಮೊದಲ ಮೈಕ್ರೋ ಚಿಪ್ ಅನ್ನು ಪ್ರದರ್ಶಿಸಿದ .

ಇದು ಒಂದು ಸಣ್ಣ (7/16 ಇಂಚ್  X 1/16 ಇಂಚ್ )  ವಿಸ್ತೀರ್ಣದ Germanium ಪಟ್ಟಿಯಾಗಿತ್ತು.

ಅದರಲ್ಲಿ ಒಂದೇ ಒಂದು  ಟ್ರಾನ್ಸಿಸ್ಟರ್ ಮತ್ತು  ಕೆಲವು ರೆಸಿಸ್ಟರು, ಕೆಪಾಸಿಟರುಗಳನ್ನು ಹುದುಗಿಸಲಾಗಿತ್ತು.

ಇದು ಒಂದು sine wave ಅನ್ನು ಉತ್ಪಾದನೆ ಮಾಡ್ತು!

 

ಕಳೆದ ವರ್ಷವೇ ಮೊದಲ ಚಿಪ್ ಗೆ ೫೦ ಆಗಿತ್ತಾದರೂ ಇತರೆ ಬೇರೆ ಕಂಪೆನಿಗಳ ಮೊದಲ ಚಿಪ್ಗೆ ಈ ವರ್ಷದಲ್ಲಿ ೫೦ ತುಮ್ಬುರುವುದರಿಂದ ಈ ವರ್ಷವೂ “IC ಗೆ ಐವತ್ತು” ಅಂತ ಬರೆದು ಖುಷಿ ಪಡೋದರಲ್ಲಿ ತಪ್ಪೇನೂ ಇಲ್ಲ. 😉

ಕೆಮರಾ ಕೊಳ್ಳುವ ಮುಂಚೆ


Digital Camera

Canon PowerShot SX100 IS

ಈ ಕ್ಷಣದಲ್ಲಿ ನನ್ ತಲೆಗೆ ಕ್ಯಾಮರಾ ಬಗ್ಗೆ ಹೊಳೆದಷ್ಟು.

ಹಿಂದೆ ನಾನು ಕ್ಯಾಮೆರಾ ತಗೋಬೇಕು ಅಂತ ಯೋಚಿಸ್ದಾಗ, ಕ್ಯಾಮರಾ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದ್ದೆ. ಅದನ್ನೇ ಇಲ್ಲಿ ಬರೀತಾ ಇದ್ದೀನಿ. ತಿಳಿದವರು ಹೆಚ್ಚಿನ ಮಾಹಿತಿ ಸೇರಿಸಿ,

ಒಂದು ಡಿಜಿಟಲ್ ಕ್ಯಾಮರಾ ತಗೋಬೇಕು ಅಂತ ನೀವು ತೀರ್ಮಾನಿಸಿದಾಗ ಕೆಳಗಿನ  ಕ್ಯಮರಾದಲ್ಲಿನ ವಿಷಯಗಳನ್ನು ನಾವು ಗಮನಿಸಬೇಕು.

 

೧. Optical Zoom

ಚಿತ್ರದ ಸ್ಪಷ್ಟತೆಯನ್ನು ಕಳೆದುಕೊಳ್ಳದೆ ಒಂದು ಸನ್ನಿವೇಶವನ್ನು ದೊಡ್ಡದು ಮಾಡಿ ಅದನ್ನು ಹಿಡಿದಿಡುವ ದಕ್ಷತೆ.

ಉದಾಹರಣೆಗೆ… ಒಂದು ಕ್ಯಮರಾದಲ್ಲಿನ ಆಪ್ಟಿಕಲ್ zoom 10X ಇದೆ ಅಂದು ಕೊಳ್ಳಿ .. ಇದರ ಅರ್ಥ ನೀವು ಇಲ್ಲಿಂದಾನೆ ದೂರದ ಚಿತ್ರವನ್ನು ಹತ್ತು ಪಟ್ಟು ದೊಡ್ಡದು ಮಾಡಿಕೊಂಡು ಬೇಕಾದ ಭಾಗವನ್ನು ಸೆರೆ ಹಿಡಿಯಬಹುದು. ಕಾಡಿನಂತ ಸನ್ನಿವೇಶಗಳಲ್ಲಿ ದೂರದೂರದ ಚಿತ್ರಗಳನ್ನು ಚಿತ್ರದ ಸ್ಪಷ್ಟತೆ ಕಳೆದುಕೊಳ್ಳದೆ ತೆಗೆಯಲು ಇದು ಸಹಕಾರಿ. 3X ಮತ್ತು 4X ಆಪ್ಟಿಕಲ್ zoom ಇತ್ತೀಚಿನ ಡಿಜಿಟಲ್ ಕ್ಯಾಮರಾಗಳಲ್ಲಿ ಸಾಮಾನ್ಯ.

ಆಪ್ಟಿಕಲ್ zoom ಜಾಸ್ತಿಯಾದಂತೆ ಕ್ಯಮರಾದ ಗಾತ್ರವೂ ದೊಡ್ದದಾಗುತ್ತೆ.

ಸಾಮಾನ್ಯವಾಗಿ ಒಂದು ಕ್ಯಾಮರಾಗೆ ಡಿಜಿಟಲ್ zoom ಕಾರ್ಯಕ್ಷಮತೆಯೂ ಇರುತ್ತೆ.. ಆದ್ರೆ ಇಲ್ಲಿಯೂ ಸಹ ನಾವು ದೊಡ್ಡದು ಮಾಡಬಹುದಾದರೂ, ಸನ್ನಿವೇಶದ / ಚಿತ್ರದ ಸ್ಪಷ್ಟತೆ ಕಡಿಮೆಯಾಗುತ್ತೆ.

 

೨. Resolution :

ಇದು ಚಿತ್ರವನ್ನು ಸೆರೆ ಹಿಡಿದ ನಂತರ ಸೇವ್ ಮಾಡುವ ಸಂದರ್ಭದಲ್ಲಿ ಗಮನಕ್ಕೆ ಬರುತ್ತೆ.

ಒಂದು ಕ್ಯಾಮರಾದ resolution ೮ Mega pixcels ಅಂದುಕೊಂಡರೆ ..  ಸೆರೆ ಹಿಡಿದ ಚಿತ್ರವನ್ನು 80 ಲಕ್ಷ ಬಿಂದುಗಳನ್ನಾಗಿ ಉಳಿಸುತ್ತೆ. ಹೆಚ್ಚು ಬಿಂದುಗಳಾಗಿ ಉಳಿಸಿದಷ್ಟೂ ಹೆಚ್ಚು ಹೆಚ್ಚು ಸ್ಪಷ್ಟತೆ ಉಳಿಸಿದ ಚಿತ್ರಕ್ಕೆ ಇರುತ್ತೆ.

ಈ resolution ಜಾಸ್ತಿಯಾದಂತೆ ಸೇವ್ ಮಾಡಲು ಹೆಚ್ಚು ಹೆಚ್ಚು ಮೆಮೊರಿ ಬೇಕಾಗುತ್ತೆ. ಅಂದರೆ ಚಿತ್ರದ ಗಾತ್ರ, byte ಗಳಲ್ಲಿ ಹೆಚ್ಚಾಗುತ್ತೆ! (ಹಾ.. ಕ್ಯಮೆರಾದಲ್ಲಿನ compression ವಿಧಾನವನೂ ಇಲ್ಲಿ ನಾವು ಗಮನದಲ್ಲಿ ಇಡಬೇಕು)

 

೩.Image stability

ಸಾಮಾನ್ಯವಾಗಿ , ಸರಳವಾಗಿ IS ಅಂತ ಕ್ಯಾಮರಾದ ಮೇಲೆ ನಮೂದಿಸಿರುತಾರೆ. ಇದು ಚಲಿಸುತ್ತಿರುವ ವಸ್ತುಗಳ ಚಿತ್ರ ತೆಗೆಯುವಾಗ ಅತ್ವ ನಾವು ಚಲಿಸುತ್ತಿರುವಾಗ ಮತ್ತು ರಾತ್ರಿಯಲ್ಲಿ ( ಹೆಚ್ಚು ಬೆಳಕಿಲ್ಲದಾಗ) ಚಿತ್ರ ತೆಗೆಯುವಾಗ ಚಿತ್ರಗಳು ಶೇಕ್ / blurr ಆಗುವುದು ಸಹಜ. ಇಂತಹ ಸಂದರ್ಭದಲ್ಲಿ IS ಹೆಚ್ಚು ಸ್ಪಷ್ಟ ಚಿತ್ರಗಳನ್ನು ತೆಗೆಯಲು ಸಾಧ್ಯ ಆಗುವಂತೆ ಮಾಡುತ್ತೆ.

 ರಾತ್ರಿಹೊತ್ತು ತೆಗೆದ ಚಿತ್ರಗಳಲ್ಲಿ “ಕೊಳ್ಳಿ ದೆವ್ವ” ಸೇರಿಕೊಳ್ಳುವುದನ್ನು ಈ IS ಅನ್ನುವ  ಮಾಂತ್ರಿಕ ತಡೆಗಟ್ಟುತ್ತಾನೆ.

 

೪. Wide angle

ಒಂದು ಕೊಟ್ಟ / ನಿಂತುಕೊಂಡ ( ಫೋಟೋ ತೆಗೆಯುವವ ) ಜಾಗದಿಂದ ಅತಿ ಹೆಚ್ಚಿನ ಭಾಗವನ್ನು ಸೆರೆ ಹಿಡಿಯಲು ಇದು ಸಹಕಾರಿ. ನಿಮ್ಮ ಕ್ಯಾಮೆರಾ ಬಳಕೆ ಸಾಮನ್ಯವಾದ ಮನೆಯಲ್ಲಿನ ಸನ್ನಿವೇಶಗಳನ್ನು ಸೆರೆ ಹಿಡಿಯುವಾದಾರೆ ಇದು ಮುಖ್ಯ. ಹತ್ತಿರದಿಂದ ಹೆಚ್ಚು ಹಗಲವಾಗಿ ಕವರ್ ಮಾಡಿದ ಚಿತ್ರ ತೆಗೆಯಬಹುದು.

ಸಾಮಾನ್ಯವಾಗಿ, ಒಂದು ಕೊಟ್ಟ ಗಾತ್ರದ ಡಿಜಿಟಲ್ ಕೆಮೆರಾದಲ್ಲಿ, ಹೆಚ್ಚು ಆಪ್ಟಿಕಲ್ zoom ಇರುವ ಕ್ಯಾಮೆರಾಗೆ ಕಡಿಮೆ wide angle ಇರುತ್ತೆ. ಮತ್ತು ಹೆಚ್ಹಿನ wide angle ಇರುವ ಕೆಮೆರಾದ ಆಪ್ಟಿಕಲ್ zoom ಕಡಿಮೆ ಇರುತ್ತೆ. ಎರಡೂ ಬೇಕು ಅಂದ್ರೆ ಕೆಮರಾ ಗಾತ್ರ ಜಾಸ್ತಿಯಾಗುತ್ತೆ.

ಭಾರತದಲ್ಲೆಲ್ಲಿ ಚಿಪ್ಪುತ್ಪಾದನೆ?


Silicon Wafer

 

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಈ ಸಂದರ್ಭದಲ್ಲಿ ನನ್ನ ತೆಲೆಗೆ ಬಂದ ನಾಲ್ಕು ಮಾತುಗಳನ್ನ ಇಲ್ಲಿ ಬರೀತಾ ಇದ್ದೀನಿ.

 

ನಾವು ಚಿಕ್ಕವರಾಗಿದ್ದಾಗ ಯರೆ ಮಣ್ಣಿನಲ್ಲಿ ಗಾಲಿ ಮಾಡಿಕೊಂಡು ಆಟ ಆಡ್ತಾ ಇದ್ವು. ಆ ಗಾಲಿಯ ತರದ, ದುಂಡಗೆ ಇರುವ, ಸಿಲಿಕಾನ್ ಅನ್ನುವ ಅರೆವಾಹಕ ವಸ್ತುವಿನಿಂದ ಮಾಡಿದ ವಸ್ತುವೇ ಈ wafer. ಇಂತ ವೇಫರ್ಗಳಲ್ಲೇ ನಾವು IC / ಚಿಪ್ಪುಗಳನ್ನು ಎರಕ ಒಯ್ಯುವುದು. ಫೋಟೋದಲ್ಲಿ ನೋಡಿ ಗೊತಾಗುತ್ತೆ.

 

 

ಈ wafer ಅನ್ನುವುದು ಅಪ್ಪಟ ಸಿಲಿಕಾನ್ ವಸ್ತು. ೨೪ ಕ್ಯಾರೆಟ್ ಗೋಲ್ಡ್ ಅಂತೀವಲ್ಲ…ಅಂತಾದ್ದು. ಇದಕ್ಕೆ ಕೆಲವು ವಸ್ತುಗಳನ್ನು ತುರುಕಿ (diffusion) , ಜಡಿದು ( implantation), ಮತ್ತೆ  ಕೆಲವನ್ನು ಸವರಿ (dposition)  ನಂತರ ಕೆರೆದು ( etching),  ಕೊನೆಗೆ ಕತ್ತರಿಸಿ ( assembly),   ಪ್ಯಾಕ್ ಮಾಡಿಯೇ ಕೆಲಸ ಮಾಡುವಂತಹ ಚಿಪ್ಪುಗಳನ್ನು ನಾವು ಪಡೆಯುವುದು.  🙂

 

 

ಸಾಮಾನ್ಯವಾಗಿ ಈ ವೇಫರ ರೂಪ ಯರೆ ಮಣ್ಣಿನ ಗಾಲಿಯಂತೆ ದುಂಡಗೆ ಇರುತ್ತೆ. ಕಾರಣ …ಇದನ್ನು ಉತ್ಪಾದಿಸುವಾಗ ಇದನ್ನು ತಿರುಗಿಸಬೇಕಾಗುತ್ತೆ. ದುಂಡಾಗಿದ್ದರೆ ಅದು ತುಂಡಾಗುವ ಸಾಧ್ಯತೆಗಳು ಬಹಳ ಕಡಿಮೆ. ಮತ್ತು ಒಂದು ಕೊಟ್ಟಿರುವ ಗಾತ್ರಕ್ಕೆ ಹೆಚ್ಚಿನ ಅಚ್ಚು / die ಗಳು ದುಂಡಗಿನ wafer ನಲ್ಲಿ ಬರುತ್ತವೆ.

 

ಇಲ್ಲಿ ಭಾರತದಲ್ಲಿ ಚಿಪ್ಗಳನ್ನು fabricate ಮಾಡುವಂತಹ ಕುಲುಮೆ / foundry ಇರುವುದು ಚಂಡಿಘಡ ದಲ್ಲಿ ಮಾತ್ರ. BEL ನಲ್ಲಿ ಇದೆ ಅಂತಾರೆ .. ಆದ್ರೆ ಅದು ತುಂಬಾ ಚಿಕ್ಕದ್ದು….8 ಮೈಕ್ರೋನ್ ಟೆಕ್ನಾಲಜಿ ಅಂತಾರೆ.. ಸರಿಯಾಗಿ ಗೊತ್ತಿಲ್ಲ.) ಈ SCL ( semiconductors Complex Ltd.) ಕ್ಯಾಂಪಸ್ ನಲ್ಲಿ ಒಂದಾರು ತಿಂಗಳು ಟ್ರೇನಿಂಗ ಪಡೆಯಲು ಸಾಧ್ಯವಾಗಿದ್ದು ನನ್ನ ಅದೃಷ್ಟವೆಂದೇ ನಾನು ಅಂದುಕೊಳ್ಳುತ್ತೇನೆ.

 

SCL ಕೆಲವು ವರ್ಷಗಳಿಂದ ಇಸ್ರೋ ಅಧೀನದಲ್ಲಿದೆ. SCL ನಲ್ಲಿ ಅನಾಲಾಗ್ ರೀತಿಯ ವಿನ್ಯಾಸಗಳಿಗೆ ೧.೨ ಮೈಕ್ರಾನ್ ತಂತ್ರ ಜ್ಞಾನವನ್ನೂ, ಡಿಜಿಟಲ್ ರೀತಿಯ ವಿನ್ಯಾಸಗಳಿಗೆ ೦.೮ ಮೈಕ್ರಾನ್ ತಂತ್ರ ಜ್ಞಾನವನ್ನೂ ಈಗ ಬಳಸುತ್ತಿದ್ದಾರೆ. ಅನೇಕ MNC ಗಳು 32nm, 22nm ಅಂತ ತುಂಬಾ ಸೂಕ್ಷ್ಮ ತಂತ್ರಜ್ಞಾನಕ್ಕೆ ಇಳಿಯುತ್ತಿರುವಾಗ ಕೆಂದ್ರ ಸರ್ಕಾರದ, Dept.of Space ಅಧೀನದ , ಅದೂ ಭಾರತದ ಏಕ ಮಾತ್ರ ಫೌಂಡ್ರಿ …ಏನಪ್ಪಾ ಇನ್ನೂ ಹಳೆಯ ಕಾಲದಲ್ಲಿದೆ ಅಂತೀರ?!… ಇರಲಿ ಬಿಡಿ ನಮ್ಮಲ್ಲಿ ಅಷ್ಟಾದ್ರೂ ಇದೆಯಲ್ವ?!

 

ಹಾ… ಕೊನೆ ವರ್ಷದ ವರೆಗೂ, ಹೈದರಾಬಾದಿನಲ್ಲಿ ಒಂದು ಫ್ಯಾಬ್ ಮಾಡ್ಬೇಕು ಅಂತ ತುಂಬಾ ಯೋಚನೆ ನಡೀತಾ ಇತ್ತು. ಅದು ನಿಂತು ಹೋದಂತೆ ಕಾಣುತ್ತೆ.

 

ಇಲ್ಲಿ SCL ನಲ್ಲಿ ಚಿಪ್ಗಳನ್ನು fabricate ಮಾಡ್ತಾರೆ ನಿಜ. ಆದ್ರೆ ಅವರೂ ಸಹಾ ಈ ಸಿಲಿಕಾನ್ wafer ಗಳನ್ನೂ ಹೊರಗಡೆಯಿಂದ ಆಮದು ಮಾಡಿಕೊಳ್ಳುತ್ತಾರೆ. ಕಾರಣ ಈ ಸಿಲಿಕಾನ್ wafer ನ ಉತ್ಪಾದನಾ ವೆಚ್ಚ! ಅದು ಅಷ್ಟೊಂದು ಕಾಸ್ಟ್ಲಿ!

ಚಿಪ್ ತಂತ್ರಜ್ನಾನ-ಸುಧೀಂದ್ರ ಅವರ ಕನ್ನಡ ಬರಹ-ನನ್ನ ವಿಮರ್ಷೆ!


ಹಾಲ್ದೊಡ್ಡೇರಿ ಸುಧೀಂದ್ರ ಅವರ ದಿನಾಂಕ ಏಪ್ರಿಲ್ ಆರು, ೨೦೦೯ ರ  ಚಿಪ್ ತಂತ್ರಜ್ನಾನಕ್ಕೆ ಹೊಸ ಸಾಧ್ಯತೆ ನೀಡುತ್ತಿರುವ ಸಾಮಗ್ರಿ ನನ್ನ ಗಮನವನ್ನು ಬಹುವಾಗಿ ಸೆಳೆಯಿತು.

ನಾನು ಇದೇ ಕ್ಷೇತ್ರದಲ್ಲಿ ಕಾಯಕ ಮಾಡ್ತ ಇರೋದು. ನಾನೂ ಸಹ ತಂತ್ರಜ್ನಾನದ ಅದರಲ್ಲೂ ಈ ಅರೆವಾಹಕ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಬರೆಯಲು ಪ್ರಯತ್ನ ಮಾಡ್ತಾ ಇದ್ದೇನೆ. ಹಾಗಾಗಿ ಸುಧೀಂದ್ರ ಅವರ ಕನ್ನಡದ ಈ ಬರಹ ಸಹಜವಾಗಿ ನನ್ನ ಗಮನ ಸೆಳೆಯಿತು.

ನಾನು ಇನ್ನೂ ಈ ಕ್ಷೇತ್ರದಲ್ಲಿ ಸರಿಯಾಗಿ ಕಣ್ಣೂ 😉 ಸಹ ಬಿಟ್ಟಿಲ್ಲ. ಹಾಗಾಗಿ ಹಿರಿಯರಾದ ಸುಧೀಂದ್ರ ಅವರ ಬರಹದ ಬಗ್ಗೆ ವಿಮರ್ಶೆ / ಟೀಕೆ ಮಾಡಲು ಹೋಗ್ತಾ ಇಲ್ಲ. ತಪ್ಪು ತೋರಿಸುವುದು ಈ ಬರಹದ ಉದ್ದೇಶವಲ್ಲ. ನಾನು ಕೆಲವೊಂದು ಸನ್ನಿವೇಶಗಳನ್ನು ಅನುಭವಿಸಿದ ಆಧಾರದ ಮೇಲೆ ನನ್ನೆರಡು ಮಾತುಗಳು ಈ ಲೇಖನದ ಬಗ್ಗೆ!

ಈ ಬ್ಲಾಗಿನಲ್ಲಿ ಲೇಖಕರ ಇಂಗ್ಲೀಶಿನ Technical terms ಗೆ ಕನ್ನಡದ (ಪಾರಿಭಾಶಿಕ ಪದಗಳು! ….ಪಾರಿಭಾಶಿಕ ಅಂದ್ರೆ ಏನು?) ಅವರ ಪದಗಳ ಬಗ್ಗೆ ಬಗ್ಗೆ ಬರೆಯುತ್ತ ಇದ್ದೇನೆ.
… content ಅನ್ನೂ ಸೇರಿಸ್ಕೊಂಡು ಇತರೆ ವಿಶಯಗಳ ಬಗ್ಗೆ ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ.

  • ವಿದ್ಯುದಲೆಗಳ ಆವೃತ್ತಿ

ಇಂತಹ ಪದಗಳಿಗೆ ಇಂಗ್ಲೀಷಿನ ಪದಗಳನ್ನೂ ಬ್ರಾಕೆಟ್ನಲ್ಲಿ ಬರೆದರೆ ಅರ್ಥ ಮಾಡಿಕೊಳ್ಳಲು ಸುಲಭ.

>“ಆವೃತ್ತಿ” ಅಂದ್ರೆ ಏನು? Frequency ಅಂತಲೆ!

>“ವಿದ್ಯುದಲೆ” ಪದವನ್ನು ನಾನು ಮತ್ತೆ 😉 ನೇರವಾಗಿ ಇಂಗ್ಲೀಷಿಗೆ ಅನುವಾದ ಮಾಡಿದರೆ current pulse ಅಂತಾಗುತ್ತೆ. ಇಲ್ಲಿ current pulse ಆವೃತ್ತಿ (frequency) ಅಂದ್ರೆ ಏನು?

ನಾನು ಊಹಿಸಬಹುದಾದ (?!) ಮಟ್ಟಿಗೆ “ವಿದ್ಯುದಲೆಗಳ ಆವೃತ್ತಿ” ಅನ್ನುವ ಪದ ಒಂದು ಚಿಪ್ ನ clock speed ಬಗ್ಗೆ ಮಾತಾಡುತ್ತೆ ಅನ್ನಿಸುತ್ತೆ. ಮತ್ತು ಈ ಪದ clock speed ಬಗ್ಗೆ ಮಾತಾಡುವದೇ ಆದರೆ “ವಿದ್ಯುದಲೆ” ಪದ ತಪಾಗುತ್ತೆ ಅನ್ಸುತ್ತೆ.

  • ಅಲೆಗಳ ಕದಡುವಿಕೆ.

Frequency Multiplier ಜೊತೆಯಲ್ಲಿ ಈ ಪದವನ್ನು ಬಳಸಿರುವುದರಿಂದ ನಾನು “ಅಲೆಗಳ ಕದಡುವಿಕೆ” ಪದಕ್ಕೆ Jitter ಅಂತ ಅರ್ಥ ಮಾಡ್ಕೊತೀನಿ. ಅಲ್ದೇ ಹೋದರೆ signal distortion / Wave distortion ಅನ್ನುವ ಪದ ತಲೆಗೆ ಬರುತ್ತೆ. ಮತ್ತು ಎರಡೂ ಪದಗಳಿಗೆ ತುಂಬಾ ವ್ಯತ್ಯಾಸವಿದೆ.

  • ಸೋಸುಕ

ಬಹುಶ ಇದು filter ಪದಕ್ಕೆ ಬದಲಾಗಿ ಬಳಸಿದ್ದಾರೆ ಅನ್ಸುತ್ತೆ. ಯಾಕೋ ಈ ಪದ ತುಂಬಾ ಕೃತಕ ಅಂತ ನನಗೆ ಅನ್ನಿಸುತ್ತೆ. ( ನಮ್ಮಲ್ಲಿ ಈ ಪದ ಬಳಕೆಯಲ್ಲಿ ಇಲ್ಲದೇ ಇರುವುದಕ್ಕೆ ಇರಬಹುದು;) ) ಈಗಾಗಲೆ ಬಳಕೆಯಲ್ಲಿರುವ “ಜಾಲರಿ” ಪದವೂ ಒಪ್ಪುತ್ತೆ.

  • Processor

ಪದವನ್ನು ಹಾಗೇಯೇ ನೇರವಾಗಿ ಬಳಸಿದ್ದಾರೆ. ಸಂಪದದಲ್ಲಿಯೇ ಈ ಮುಂಚೆ ಬಳಸಲ್ಪಟ್ಟ “ಸಂಸ್ಕಾರಕ” ಪದ ಒಪ್ಪುತ್ತೇ ಅನ್ನಿಸುತ್ತೆ. ( ಹಾ ಬ್ರಾಕೆಟ್ನಲ್ಲಿ ಇಂಗ್ಲೀಶಿನ ಪದವನ್ನು ಒಮ್ಮೆಯಾದರೊ ಕೊಡಬೇಕು).

  • ಚಿಪ್

ಲೇಖನದ ಮೊದಲಲ್ಲೇ “ಕಂಪ್ಯೂಟರಿನ ಮಿದುಳಾದ ಸಿ ಪಿ ಯು ಅನ್ನು ಮುದ್ದಾಗಿ “ಚಿಪ್” ಎಂದು ಕರೆಯುವ ವಾಡಿಕೆಯಿದೆ” ಅಂತ ಇದೆ. ಇದು ಅಷ್ಟೊಂದು ಸರಿಯಾದ ವಾಕ್ಯವಲ್ಲ.. ಮತ್ತು ಓದುಗರನ್ನು mislead ಮಾಡುವ ಸಾಧ್ಯತೆ ಇದೆ.

ಈ ಬರಹಕ್ಕೆ ಇನ್ನೂ ಹೆಚ್ಚಿನ ವಷಯವನ್ನು ಮುಂದಿನಬ್ಲಾಗಿನಲ್ಲಿ ಸೇರಿಸಲು ಯೋಚಿಸ್ತಾ ಇದ್ದೀನಿ.

Note: ಈ ಬ್ಲಾಗಿನ ಉದ್ದೇಶ ಕನ್ನಡದಲ್ಲಿ ತಂತ್ರಜ್ನಾನದ ಬಗೆಗಿನ ಚರ್ಚೆಗೆ ನನ್ನೊಂದಿಷ್ಟು ಮಾತು ಸೇರಿಸುವುದಷ್ಟ್ಟೇ… ಟೀಕೆಗಾಗಿ ಈ ಬ್ಲಾಗು ಅಲ್ಲ.

DC DC Converter!


ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧುನಿಕ  ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ ( power) ಪೂರೈಕೆಯಾಗಬೇಕಾಗುತ್ತೆ.

  • ಇಂತಹ ಮಿಮ್ಬಲ್ಮೆ (?!) ಉಪಕರಣಗಳು (ಇಲೆಕ್ಟ್ರಾನಿಕ್ items) ಸಾಮಾನ್ಯವಾಗಿ ಹಲವು ಉಪ ಸರ್ಕ್ಯುಟ್ ಗಳನ್ನು ಹೊಂದಿರುತ್ತೆ ಮತ್ತು ಅವು ಒಂದಕ್ಕಿಂತ ಒಂದು ಬೇರೆ ಬೇರೆ ಶಕ್ತಿ ಪೂರೈಕೆ ( power supply )ಯಿಂದ ಕೆಲಸ ಮಾಡುವಂತವು ಆಗಿರಬಹುದು.

ಇಂತಹ ಸಂದರ್ಭದಲ್ಲಿ, ಇರುವ ಒಂದು ವೋಲ್ಟೇಜು ಮಟ್ಟವನ್ನು ಉಪ ಸರ್ಕ್ಯುಟ್ ಗಳಿಗೆ ಬೇಕಾದ ಬೇರೆ ಬೇರೆ ವೋಲ್ಟೇಜು ಮಟ್ಟಕ್ಕೆ (ಗಳಿಗೆ) ಬದಲಾಯಿಸುವ ಕೆಲಸವನ್ನು ಈ DC DC converter ಮಾಡುತ್ತೆ.

  • ಈ ಸಾಧನಗಳು ಬ್ಯಾಟರಿಯಲ್ಲಿನ ಕಲೆಹಾಕಿದ ಶಕ್ತಿಯನ್ನು ಬಳಸಿಕೊಂಡು ಕೆಲಸಮಾಡುತ್ತವೆ. ಮತ್ತು ಈ ಶಕ್ತಿಯು ಹೆಚ್ಚು ಬಳಸಲ್ಪಟ್ಟಂತೆ ಬ್ಯಾಟರಿಯ ವೋಳ್ಟೇಜು ಕಡಿಮೆ ಆಗುತ್ತಾ ಹೋಗುತ್ತೆ.

ಇಂತಹ ಸಂದರ್ಭದಲ್ಲಿ.. ಭಾಗಶ: ಕಡಿಮೆಯಾದ ಬ್ಯಾಟರಿಯ ವೋಳ್ಟೇಜನ್ನು, DC DC converter ಮೊದಲಿನ ಮಟ್ಟಕ್ಕೆ ತರುತ್ತೆ. ಹಾಗಾಗಿ ಎರೆಡೆರಡು ಬ್ಯಾಟರಿ ಬಳಸುವ ಅತ್ವ ಮತ್ತೆ ಚಾರ್ಜ್ ಮಾಡುವ ಕೆಲಸ ತಪ್ಪುತ್ತೆ.

….ಒಂದು ಸರ್ಕ್ಯುಟ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು Voltage Doubler ಹೇಗೆ ಕೆಲಸ ಮಾಡುತ್ತೆ ಅಂತ ಮುಂದೆ ಸೇರುಸ್ತೀನಿ.

ಮೂರ್ ನ ಕಟ್ಟಳೆ


ಗಾರ್ಡೆನ್ ಮೂರ್

ಗಾರ್ಡೆನ್ ಮೂರ್

Moore’s law, ಮೂರ್ಸ್ ಲಾ, ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! 😉

ಈ “ಮೂರ್ ನ ಕಟ್ಟಳೆ” ಅನ್ನುವುದು ಒಂದು ರೀತಿ empirical ಫಾರ್ಮುಲ. ಅಂದ್ರೆ ಅನುಭವದಿಂದ ಗಮನಕ್ಕೆ ಬಂದಿದ್ದು. ಯಾವುದೇ ಲೆಕ್ಕ , ಫಾರ್ಮುಲಗಳು ಇಲ್ಲಿ ಈ ಸಂಬಂಧವನ್ನು ಸಾಧಿಸುವಲ್ಲಿ ಪ್ರಾಮುಖ್ಯತೆ ವಹಿಸಲ್ಲ.

ಈ ಕಟ್ಟಳೆ ಏನು ಹೇಳುತ್ತಪ್ಪ ಅಂದ್ರೆ ” ಒಂದು ಅಚ್ಚಿನಲ್ಲಿ (die) ಎರಕ ಒಯ್ಯಬಹುದಾದ ಟ್ರಾನ್ಸಿಸ್ಟರುಗಳ ಸಂಖ್ಯೆ ಪ್ರತಿ ಒಂದೊವರೆ ವರ್ಷಕ್ಕೆ ದುಪ್ಪಟ್ಟಾಗುತ್ತೆ .” ಇದನ್ನು ಒಂದು ರೀತಿಯಲ್ಲಿ exponential ಬೆಳವಣಿಗೆ ಅನ್ನಬಹುದು.

ಗಾರ್ಡೆನ್ ಮೂರ್ ಅನ್ನುವ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಈತ ಇಂಟೆಲ್ ನ ಸಂಸ್ಥಾಪಕರಲ್ಲಿ ಒಬ್ಬ. ಮೂರ್ ನ ಕಟ್ಟಳೆ ಅನ್ನುವ “ಪ್ರವೃತ್ತಿ” ಯನ್ನು ೧೯೬೫ ರಲ್ಲೇ ಈತ ಊಹಿಸಿದ್ದ. ಆಗ ಬಂದ ಈತನ ಈ ಬರಹವೇ ಮೂರ್ ನ ಕಟ್ಟಳೆಗೆ ಮೂಲ ಅನ್ನುವುದು ಅನೇಕರ ಅನಿಸಿಕೆ.

ಈ ಪ್ರವೃತ್ತಿ ಮುಖ್ಯವಾಗಿ ಚಿಪ್ ಒಳಗಿನ ಟ್ರಾನ್ಸಿಸ್ಟರುಗಳು, ತಂತಿಗಳು ಮುಂತಾದ ಇತರ ಘಟಕಗಳು ಗಾತ್ರದಲ್ಲಿ ಕುಗ್ಗುವ ಕಾರಣದಿಂದ ಕಂಡುಬರುತ್ತೆ.

feature size ಅನ್ನುವುದು ಚಿಪ್ ನಲ್ಲಿ, ಒಂದು lithography ತಂತ್ರಜ್ಞಾನದಿಂದ ಎಳೆಯಬಹುದಾದ ಅತ್ಯಂತ ಸಣ್ಣ(ತೆಳ್ಳನೆಯ)ಗೆರೆ / ಕನಿಷ್ಟ ಗಾತ್ರದ ಆಕೃತಿಯ ಉದ್ದ ಅನ್ನಬಹುದು. ಇದು ಸಾಮಾನ್ಯವಾಗಿ ಒಂದು ಕನಿಷ್ಠ ಗಾತ್ರದ MOS ಟ್ರಾನ್ಸಿಸ್ಟರ್ ನ ಉದ್ದಕ್ಕೆ ಸಮವಾಗಿರುತ್ತೆ. ಅಂದರೆ ಈ ಉದ್ದಕ್ಕಿಂತ ಕಡಿಮೆ ಉದ್ದದ (ಅತ್ವ ಗಾತ್ರದ) ಟ್ರಾನ್ಸಿಸ್ಟರ್ ಅನ್ನು ಎರಕ ಒಯ್ಯಲು ಆಗದು. ಈ feature size ಕಡಿಮೆ ಆದಂತೆ ಹೆಚ್ಚು ಹೆಚ್ಚು ಟ್ರಾನ್ಸಿಸ್ಟರ್ ಗಳನ್ನು ಸಿಲಿಕಾನ್ ಅಚ್ಚಿನ ಮೇಲೆ ಎರಕ ಒಯ್ಯಲು ಸಾಧ್ಯವಾಗುತ್ತೆ.

“CMOS 130nm”, “90nm process”, “45nm CMOS Technology” ಹೀಗೆ ನೀವು ಪದಗಳನ್ನು ಕೇಳಿರುತ್ತೀರಿ. ಈ ನ್ಯಾನೋಮೀಟರ್ (nm) ಅಂತ ಬಳಸುವ ತಂತ್ರಜ್ಞಾನಗಳು ಎರಕ ಒಯ್ಯುವ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತಹ feature size ಉದ್ದವೇ 🙂 .

ಮೂರ್ ನ ಕಟ್ಟಳೆ plot

ಮೂರ್ ನ ಕಟ್ಟಳೆ plot